ಹಿಂದಿ ರಿಯಾಲಿಟಿ ಶೋ ವೊಂದರಲ್ಲಿ ಬಾಲಿವುಡ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಮಕ್ಕಳನ್ನು ಮಾಡಿಕೊಳ್ಳಲು ಪುಕ್ಕಟೆ ಸಲಹೆ ನೀಡಲಾಘಗಿದೆ. ಸಲಹೆ ನೀಡಿರುವುದು ಬಾಲಿವುಡ್ ನಟಿ ರಾಣಿ ಮುಖರ್ಜಿ ಎನ್ನುವುದು  ಅಷ್ಟೆ ಮುಖ್ಯ ವಿಚಾರ.

ದಸ್ ಕಾ ದಮ್ ನ ಫಿನಾಲೆ ಸೆಪ್ಟೆಂಬರ್ ನಲ್ಲಿ  ಪ್ರಸಾರವಾಗಲಿದೆ. ಈ ಶೋದಲ್ಲಿ  ಸೆಲೆಬ್ರಿಟಿಗಳು ಪಾಲ್ಗೊಂಡಿದ್ದ ವೇಳೆ ಸಲ್ಮಾನ್ ಗೆ ಮಕ್ಕಳನ್ನು ಮಾಡಿಕೊಳ್ಳು ಹೇಳಲಾಗಿದೆ.

ಎನಾಕ್ಟ್ ಮಾಡುವ ವೇಳೆ ರಾಣಿ ಮುಖರ್ಜಿ ಸಲ್ಮಾನ್ ಉದ್ದೇಶಿಸಿ ಹೇಳಿದ್ದ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಓಡುತ್ತಿದೆ. ಮದುವೆ -ಗಿದುವೆ ಎಲ್ಲಾ ಬಿಡು.. ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಗಮನ ಕೊಡು .. ಎಂಬ ಹೇಳಿಕೆ ವೈರಲ್ ಆಗ್ತಿದೆ. ಶೋದಲ್ಲಿ ರಾಣಿ ಮುಖರ್ಜಿ, ಸಲ್ಮಾನ್ ರೊಂದಿಗೆ ಶಾರುಖ್ ಖಾನ್ ಮತ್ತು ಜ್ಯೂನಿಯರ್ ಶಾರುಖ್ ಖಾನ್ ಸಹ ಕಾಣಿಸಿಕೊಂಡಿದ್ದರು.