ನಟ ರಣಬೀರ್ ಇನ್ಸ್ಟಾಗ್ರಾಮ್, ಫೇಸ್ ಬುಕ್, ಟ್ವಿಟರ್ ಗಳಲ್ಲಿ ಅಧಿಕೃತ ಅಕೌಂಟ್ ಗಳನ್ನು ಹೊಂದಿಲ್ಲ. ಆದರೆ ಮಾಜಿ ಗರ್ಲ್ ಫ್ರೆಂಡ್ ದೀಪಿಕಾ ಪಡುಕೋಣೆ, ಅವಳ ಪತಿ ರಣಬೀರ್ ಸಿಂಗ್ ರನ್ನು ಸೀಕ್ರೇಟಾಗಿ ಫಾಲೋ ಮಾಡ್ತಾರಂತೆ! 

ರಣಬೀರ್ ಕಪೂರ್ ಗೆ ಅಧಿಕೃತ ಅಕೌಂಟ್ ಇಲ್ಲದಿದ್ದರೂ ಗುಟ್ಟಾಗಿ ಎರಡು ಅಕೌಂಟ್ ಗಳನ್ನು ಹೊಂದಿದ್ದು ಅದರಿಂದ ಮಾಜಿ ಗರ್ಲ್ ಫ್ರೆಂಡ್ ದೀಪಿಕಾ ಪಡುಕೋಣೆಯನ್ನು ಗುಟ್ಟಾಗಿ ಫಾಲೋ ಮಾಡ್ತಾರಂತೆ! ಬಿಟ್ಟರೂ ಬಿಡದೀ ಮಾಯೇ! ಇರಬಹುದಾ!?  ಕೇವಲ ಗರ್ಲ್ ಫ್ರೆಂಡ್ ಮಾತ್ರವಲ್ಲ, ಅವಳ ಗಂಡ ರಣಬೀರ್ ಸಿಂಗ್ ರನ್ನೂ ಫಾಲೋ ಮಾಡ್ತಾರಂತೆ. 

ಮದುವೆಗೂ ಮುನ್ನ ದೀಪಿಕಾ ಪಡುಕೋಣೆ- ರಣಬೀರ್ ಕಪೂರ್ ನಡುವೆ ಕುಚ್ ಕುಚ್ ಹೋ ರಹಾ ಹೇ ಶುರುವಾಗಿತ್ತು ಎಂಬ ಮಾತು ಬಿ- ಟೌನ್ ನಲ್ಲಿ ಕೇಳಿ ಬಂದಿತ್ತು.  ಸಾಕಷ್ಟು ಕಡೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ನಂತರ ಬೇರೆ ಬೇರೆಯಾದರು. ನಂತರ ದೀಪಿಕಾ ರಣವೀರ್ ಜೊತೆ ಸುತ್ತೋಕೆ ಶುರು ಮಾಡಿದರು. ಕೊನೆಗೂ ಮದುವೆಯೂ ಆದರು. ಆದರೆ ರಣಬೀರ್ ಕಪೂರ್, ದೀಪಿಕಾ , ರಣವೀರ್ ಸಿಂಗ್ ಸಂಬಂಧ ಚೆನ್ನಾಗಿಯೇ ಇದೆ. 

ಅದೇ ರೀತಿ ಕತ್ರಿನಾ ಕೈಫ್, ಅಲಿಯಾ ಭಟ್ ರನ್ನು ಫಾಲೋ ಮಾಡ್ತಾರಂತೆ. ಪ್ರೀತಿ ಈಗ ಮುಗಿದ ಅಧ್ಯಾಯವಾದರೂ ಮರೆಯಲಾಗದ ಸಿಲಬಸ್ ಇದ್ದಂಗೆ!