ಕನ್ನಡದ ಕೋಟ್ಯಧಿಪತಿಯಲ್ಲಿ ರಕ್ಷಿತ್‌ ಶೆಟ್ಟಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 29, Aug 2018, 12:56 PM IST
Rakshith Shetty Participate in Kannadada Kotyadhipathi
Highlights

ಕನ್ನಡದ ಕೋಟ್ಯಧಿಪತಿಯಲ್ಲಿ ರಕ್ಷಿತ್‌ ಶೆಟ್ಟಿ | ಗೆದ್ದ ಹಣ ಕೊಡಗು ನೆರೆ ಸಂತ್ರಸ್ತರಿಗೆ | 50 ನೇ ಸಂಚಿಕೆಯ ವಿಶೇಷವಿದು 

ಬೆಂಗಳೂರು (ಆ. 29): ಸ್ಟಾರ್‌ ಸುವರ್ಣವಾಹಿನಿಯ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ 50ನೇ ಸಂಚಿಕೆಯತ್ತ ದಾಪುಗಾಲಿಟ್ಟಿದೆ.

ಇದೀಗ ಅದು ಕೊಡಗು ಸಂತ್ರಸ್ತರ ನೆರವಿಗಾಗಿ ವಿಶೇಷ ಸಂಚಿಕೆ ಪ್ರಸಾರ ಮಾಡುತ್ತಿದ್ದು, ಆ ಸಂಚಿಕೆಯ ಹಾಟ್‌ಸೀಟ್‌ನಲ್ಲಿ ರಕ್ಷಿತ್‌ ಶೆಟ್ಟಿಕೂರಲಿದ್ದಾರೆ. ಕಾರ್ಯಕ್ರಮದಲ್ಲಿ ಅವರ ತಂದೆ -ತಾಯಿ, ಸಹೋದರ ರಂಜಿತ್‌ ಮತ್ತು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಕೂಡ ಭಾಗವಹಿಸುತ್ತಿದ್ದಾರೆ.

ಆಗಸ್ಟ್‌ 31ರಂದು ಈ ಸಂಚಿಕೆ ಪ್ರಸಾರವಾಗಲಿದೆ. ರಕ್ಷಿತ್‌ ಶೆಟ್ಟಿಕಾರ್ಯಕ್ರಮದಲ್ಲಿ ಸಿಂಪಲ್‌ ಸುನಿ, ಹೇಮಂತ್‌ ರಾವ್‌, ಕಿರಣ್‌ರಾಜ್‌ ಅವರ ಬಗ್ಗೆ ಹಲವು ಇಂಟರೆಸ್ಟಿಂಗ್‌ ಸಂಗತಿ ಹಂಚಿಕೊಂಡಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಗೆ ಈ ಸಂಚಿಕೆ ಪ್ರಸಾರವಾಗುತ್ತಿದೆ. 

 

 

loader