Asianet Suvarna News Asianet Suvarna News

ಸಾಲ ವಾಪಸ್ ಕೊಡದ ಜನಪ್ರಿಯ ಹಾಸ್ಯ ನಟ: 3 ತಿಂಗಳ ಜೈಲು ಶಿಕ್ಷೆ!

ಸಾಲ ಹಿಂದಿರುಗಿಸದ ಕಾರಣಕ್ಕೆ ಜನಪ್ರಿಯ ಹಾಸ್ಯನಟನಿಗೆ ಜೈಲು ಶಿಕ್ಷೆ! ಸಂಕಷ್ಟದಲ್ಲಿ ಬಾಲಿವುಡ್ ನ ಜನಪ್ರಿಯ ಹಾಸ್ಯನಟ ರಾಜ್‌ಪಾಲ್ ಯಾದವ್‌! ದೆಹಲಿ ಮೂಲದ ಉದ್ಯಮಿ ಅಗರ್ವಾಲ್ ಬಳಿ 5 ಕೋಟಿ ರೂ. ಸಾಲ! ಚಿತ್ರಕ್ಕಾಗಿ ಅಗರ್ವಾಲ್ ಬಳಿ 5 ಕೋಟಿ ರೂ. ಸಾಲ ಮಾಡಿದ್ದ ರಾಜ್‌ಪಾಲ್! ರಾಜ್‌ಪಾಲ್ ಯಾದವ್‌ಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ದೆಹಲಿ ಹೈಕೋರ್ಟ್ 

Rajpal Yadav sentenced to three months in imprisonment
Author
Bengaluru, First Published Nov 30, 2018, 8:47 PM IST
  • Facebook
  • Twitter
  • Whatsapp

ನವದೆಹಲಿ(ನ.30): ಬಾಲಿವುಡ್ ನ ಜನಪ್ರಿಯ ಹಾಸ್ಯನಟ ರಾಜ್‌ಪಾಲ್ ಯಾದವ್‌ಗೆ ಭಾರೀ ಸಂಕಷ್ಟ ಎದುರಾಗಿದ್ದು, ಸಾಲ ಹಿಂದಿರುಗಿಸದ ಕಾರಣಕ್ಕೆ ದೆಹಲಿ ಹೖಕೋರ್ಟ್ ನಟನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ದೆಹಲಿ ಮೂಲದ ಉದ್ಯಮಿ ಎಮ್ ಜಿ ಅಗರ್ವಾಲ್ ಬಳಿ ಪಡೆದಿದ್ದ 5 ಕೋಟಿ ರೂ. ಸಾಲ ಹಿಂತಿರುಗಿಸದ ಕಾರಣ ದೆಹಲಿ ಹೈ ಕೋರ್ಟ್ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್‌ಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

2010ರಲ್ಲಿ ರಾಜ್‌ಪಾಲ್ ಯಾದವ್‌ ಮೊಟ್ಟ ಮೊದಲ ಸಲ ನಟಿಸಿ, ನಿರ್ದೇಶಿಸಿದ ಚಿತ್ರಕ್ಕಾಗಿ ದೆಹಲಿ ಮೂಲದ ಮರುಳಿ ಪ್ರಾಜೆಕ್ಟ್ ಕಂಪೆನಿ ಮಾಲೀಕ ಎಮ್ ಜಿ ಅಗರ್ವಾಲ್ ಬಳಿ 5 ಕೋಟಿ ರುಪಾಯಿ ಸಾಲ ಪಡೆದಿದ್ದರು.

Rajpal Yadav sentenced to three months in imprisonment

ಈ ಮೊತ್ತಕ್ಕೆ ಬಡ್ಡಿ ಸೇರಿ 2011 ಡಿಸೆಂಬರ್ 3ರ ಸಮಯಕ್ಕೆ ಮತ್ತೆ ವಾಪಸ್ ಮಾಡುತ್ತೇನೆ ಎಂದು ರಾಜ್‌ಪಾಲ್ ಯಾದವ್‌ ಮಾತು ಕೊಟ್ಟಿದ್ದರು. ಆದರೆ ರಾಜ್‌ಪಾಲ್ ಯಾದವ್‌ ಮಾತು ತಪ್ಪಿದ್ದರು.

ಈ ಹಿಂದೆ ದೆಹಲಿಯ ಕಾರ್ಕಾರದುಮ ನ್ಯಾಯಾಲಯ ರಾಜ್‌ಪಾಲ್ ಯಾದವ್‌ಗೆ ಆರು ತಿಂಗಳ ಜೈಲು ಶಿಕ್ಷೆ ಜೊತೆಗೆ 11.2 ಕೋಟಿ ರೂ. ದಂಡ, ಆತನ ಪತ್ನಿ ರಾಧಾ ಯಾದವ್ ಗೆ 70 ಲಕ್ಷ ರೂ. ದಂಡ ವಿಧಿಸಿತ್ತು.

Follow Us:
Download App:
  • android
  • ios