ಬೆಂಗಳೂರು (ಸೆ. 24):  ಪೊಗರು ಸಿನಿಮಾ ಶೂಟಿಂಗ್ ಮುಗಿಸಿ ಬರುವಾಗ ನಟ ಧ್ರುವಾ ಸರ್ಜಾ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ.  ಪೊಗರು ಸಿನಿಮಾ ಶೂಟಿಂಗ್ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು.  ಆಗ ಎದುರಿನಿಂದ ಬಂದ ಲಾರಿ- ಕಾರಿಗೆ ಡಿಕ್ಕಿ ಹೊಡೆದಿದೆ. ಧ್ರುವಾ ಸರ್ಜಾಗೆ ತರಚು ಗಾಯಗಳಾಗಿದ್ದು ಡ್ರೈವರ್ ಕೈಗೆ ತುಸು ಪೆಟ್ಟಾಗಿದೆ. 

ತೆರೆ ಮೇಲೆ ಪೊಗರು ‘ಖದರ್’; ಅಭಿಮಾನಿಗಳು ಸಖತ್ ಥ್ರಿಲ್!

ಪೊಗರು ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು ಇತ್ತೀಚಿಗೆ ಹೈದರಾಬಾದ್ ನಲ್ಲಿ ಶೂಟಿಂಗ್ ಮುಗಿಸಿದೆ ಚಿತ್ರತಂಡ. ಚಿತ್ರದ ಕ್ಲೈಮ್ಯಾಕ್ಸನ್ನು ಬಳ್ಳಾರಿಯಲ್ಲಿ ಮುಗಿಸಿಕೊಂಡು ಬರುವಾಗ ಅಪಘಾತ ಸಂಭವಿಸಿದೆ. ಈ ಬಗ್ಗೆ ಸ್ಪಷ್ಟನೆಗಾಗಿ ಸುವರ್ಣ ನ್ಯೂಸ್ ನಿರ್ಮಾಪಕರನ್ನು ಸಂಪರ್ಕಿಸಿದಾಗ, ಧ್ರುವಾ ಸರ್ಜಾ ಕಾರಿನಲ್ಲಿ ಬರುತ್ತಿರುವುದನ್ನು ತಿಳಿದ ಅಭಿಮಾನಿಗಳು ಅವರನ್ನು ಮಾತನಾಡಿಸಲು ಹಿಂದೆ ಬಂದಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಡ್ರೈವ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ’ ಎಂದಿದ್ದಾರೆ.   

ಧ್ರುವಾ ಸರ್ಜಾ ಕೈಲಿ ಒದೆಸಿಕೊಳ್ಳಲ್ಲ ಅಂದ್ರಾ ಜಗಪತಿ ಬಾಬು?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಸಿನಿಮಾಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ತೆರೆ ಮೇಲೆ ಖದರ್ ತೋರಿಸಲಿದ್ದಾರೆ ಬಹದ್ದೂರ್ ಹುಡುಗ. ಪೊಗರು ಕ್ಲೈಮ್ಯಾಕ್ಸ್ ನಲ್ಲಿ ಧ್ರುವಗೆ ಸಖತ್ ಫೈಟ್ ಕೊಡಲು ರೆಸಲರ್ ಮೋರ್ಗಾನ್ ಎಂಟ್ರಿ ಕೊಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಡಿಸಂಬರ್ ನಲ್ಲಿ ‘ಪೊಗರು’ ತೆರೆ ಮೇಲೆ ಬರಲಿದೆ.