ರಿಯಲ್ ಲೈಫ್’ನಲ್ಲೂ ಹೀರೋ ಆದ ಪ್ರಭಾಸ್

First Published 24, Jul 2018, 3:30 PM IST
Prabhas Turns Hero In Real Life
Highlights

ಸೂಪರ್  ಸ್ಟಾರ್ ಪ್ರಭಾಸ್ ಮಾಡಿರುವ ಈ ಕೆಲಸಕ್ಕೆ ಶಹಬ್ಬಾಸ್ ಹೇಳಲೇಬೇಕು. ಇವರು ಸ್ಕ್ರೀನ್ ಮೇಲೆ ಮಾತ್ರವಲ್ಲ, ರಿಯಲ್  ಲೈಫ್’ನಲ್ಲೂ ಹೀರೋ ಆಗಿದ್ದಾರೆ. ಇವರ ಸೇವಾ ಮನೋಭಾವ ನೋಡಿದ್ರೆ ಪ್ರಭಾಸ್ ಬಗ್ಗೆ ಹೆಮ್ಮೆ ಎನಿಸುತ್ತದೆ. 

ಬೆಂಗಳೂರು (ಜು. 24): ಸೂಪರ್ ಸ್ಟಾರ್ ಪ್ರಭಾಸ್ ತೆರೆ ಮೇಲೆ ಮಾತ್ರ ಹೀರೋ ಅಲ್ಲ ನಿಜ ಜೀವನದಲ್ಲೂ ಅವರು ರಿಯಲ್ ಹೀರೋ ಆಗಿದ್ದಾರೆ. 

ಪ್ರತಿ ವರ್ಷ ಲಕ್ಷಗಟ್ಟಲೇ ಹಣವನ್ನು ಚಾರಿಟಿಗಾಗಿ ಕೊಡುತ್ತಾರೆ. ಇತ್ತೀಚಿಗೆ ನಲಗೊಂದ ಜಿಲ್ಲೆಯ ಅಂಧ ಮಕ್ಕಳ ಶಾಲೆಗೆ ಭೇಟಿ ಕೊಟ್ಟಿದ್ದಾರೆ. ಮಕ್ಕಳ ಜೊತೆ ಒಂದಷ್ಟು ಸಮಯ ಕಳೆದಿದ್ದಾರೆ ಅವರಿಗೆ ಖುಷಿ ಕೊಟ್ಟಿದ್ದಾರೆ. ಅಂಧ ಮಕ್ಕಳ ಶಾಲೆಗೆ 10 ಲಕ್ಷ ರೂ ದೇಣಿಗೆಯನ್ನು ನೀಡಿದ್ದಾರೆ. ರೀಲ್’ನಲ್ಲಿ ಮಾತ್ರವಲ್ಲ ರಿಯಲ್’ನಲ್ಲೂ ಹೀರೋ ಎನಿಸಿಕೊಂಡಿದ್ದಾರೆ. 

ಪ್ರಬಾಸ್ ಚಾರಿಟಿ ನೀಡುವುದು ಇದೇ ಮೊದಲಲ್ಲ. ಪ್ರತಿವರ್ಷ ಕೊಡುತ್ತಲೇ ಇರುತ್ತಾರೆ. ಆದರೆ ಅದನ್ನು ಪ್ರಚಾರ ಮಾಡಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ಪ್ರಭಾಸ್ ಇನ್ನಷ್ಟು ಇಷ್ಟವಾಗಿ ಬಿಡುತ್ತಾರೆ. 

ಅನುಷ್ಕಾ-ಪ್ರಭಾಸ್ ಮದ್ವೆ ಬಗ್ಗೆ ಅನುಷ್ಕಾ ಅಮ್ಮ ಏನಂತಾರೆ?

 

ಪ್ರಭಾಸ್ ಲೈಫಲ್ಲಿ ಹೊಸ ಹುಡುಗಿ ಎಂಟ್ರಿ! ಅನುಷ್ಕಾ ಕೈ ಕೊಟ್ರಾ?


 

loader