Asianet Suvarna News Asianet Suvarna News

ಚಿತ್ರರಂಗದ ರಾಷ್ಟ್ರೀಯ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ!

ಭಾರತೀಯ ಚಿತ್ರರಂಗದ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಉದ್ಘಾಟನೆ| ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ| ಬದಲಾಗುತ್ತಿರುವ ದೇಶಕ್ಕೆ ಚಿತ್ರರಂಗದ ಕೊಡುಗೆ ಮಹತ್ವದ್ದು ಎಂದ ಪ್ರಧಾನಿ| ‘ಮಿಲಿಯನ್ ಸಮಸ್ಯೆಗಳಿದ್ದರೆ ಅದಕ್ಕೆ ಬಿಲಿಯನ್ ಪರಿಹಾರಗಳಿವೆ’| ಸಮಾರಂಭದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿ

PM Modi inaugurates National Museum of Indian Cinema
Author
Bengaluru, First Published Jan 19, 2019, 8:59 PM IST

ಮುಂಬೈ(ಜ.19): ಭಾರತೀಯ ಚಿತ್ರರಂಗದ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಬದಲಾಗುತ್ತಿರುವ ದೇಶಕ್ಕೆ ಚಿತ್ರರಂಗದ ಕೊಡುಗೆ ಅತ್ಯಂತ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿ ಮಿಲಿಯನ್ ಸಮಸ್ಯೆಗಳಿದ್ದರೆ ಅದಕ್ಕೆ ಬಿಲಿಯನ್ ಪರಿಹಾರಗಳಿವೆ ಎಂದು ಹೇಳಿದರು.

ಈ ವೇಳೆ ಕಲಾವದಿರನ್ನು ಉದ್ದೇಶಿಸಿ ಮೋದಿ ‘ಹೌ ಇಸ್ ದಿ ಜೋಶ್?’ ಎಂಧು ಕೇಳಿದರು. ಆಗ ಕಲಾವಿದರೆಲ್ಲಾ ‘ಹೈ ಸರ್’ ಎಂದು ಉತ್ತರ ನೀಡಿದರು.

ಸಮಾರಂಭದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್, ಭಾರತೀಯ ಸೆನ್ಸಾರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಶಿ ಭಾಗವಹಿಸಿದ್ದರು.

ಚಿತ್ರರಂಗದ ಪರವಾಗಿ ಬಾಲಿವುಡ್ ಕಲಾವಿದರಾದ ಜೀತೇಂದ್ರ, ರಣ್‌ಬೀರ್ ಕಪೂರ್, ಅಮೀರ್ ಖಾನ್, ಆಶಾ ಬೋಂಸ್ಲೆ, ಎ ಆರ್ ರೆಹಮಾನ್, ಬೋನಿ ಕಪೂರ್, ಸುಭಾಷ್ ಗಾಯ್, ಆನಂದ್ ಎಲ್ ರೈ, ರೋಹಿತ್ ಶೆಟ್ಟಿ, ಕರಣ್ ಜೋಹರ್, ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

1997ರಲ್ಲಿ ಈ ಮ್ಯೂಸಿಯಂ ನಿರ್ಮಾಣ ಕೆಲಸ ಆರಂಭವಾಗಿದ್ದು, ಅಂತಿಮವಾಗಿ ಸುಮಾರು ಎರಡು ದಶಕಗಳ ನಂತರ ಸಂಪೂರ್ಣವಾಗಿ ಸಿದ್ಧವಾಗಿ ಇಂದು ಲೋಕರ್ಪಣೆಯಾಗಿದೆ.

Follow Us:
Download App:
  • android
  • ios