ಅಯೋಗ್ಯ ಚಿತ್ರದ ಪ್ರದರ್ಶನದ ಕುರಿತಾಗಿ ಫೇಸ್ ಬುಕ್ ಲೈವ್ ಬಂದ ನಾಯಕ ನಟ ನೀನಾಸಂ ಸತೀಶ್ ಬುಕ್ ಮೈ ಶೋ ಸೇರಿದಂತೆ ಮಲ್ಟಿಫ್ಲೆಕ್ಸ್ ಹಾಗೂ ಹೈದರಾಬಾದ್ ಫಿಲಂ ಚೆಂಬರ್‌ಗೆ ಝಾಡಿಸಿದ್ದಾರೆ. ಕನ್ನಡಿಗರಿಗೆ ಧನ್ಯವಾದ ಹೇಳುತ್ತಾ ಕನ್ನಡ ಚಿತ್ರರಂಗ ಸದ್ಯ ಎದುರಿಸುತ್ತಿರುವ ಸಮಸ್ಯೆ ಬಿಚ್ಚಿಟ್ಟಿದ್ದಾರೆ.

ನಮ್ಮ ರಾಜ್ಯದಲ್ಲಿ ಪರಭಾಷೆ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಪಕ್ಕದ ಹೈದರಾಬಾದ್ ನಲ್ಲಿ ಎರಡು ಶೋ ಹಾಕಲು ಅವಕಾಶ ಸಿಗುತ್ತಿಲ್ಲ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ಸಲ್ಲಿಸುತ್ತೇನೆ ಎಂದಿದ್ದಾರೆ.

ಬುಕ್ ಮೈ ಶೋದಲ್ಲಿ ಯಾರೋ ನಾಲ್ಕು ಜನ ಕೆಟ್ಟದಾಗಿ ಬರೆದ ಮಾತ್ರಕ್ಕೆ ಸಿನಿಮಾದ ಮೇಲೆ ಯಾವ ಪರಿಣಾಮ ಬೀರಲ್ಲ. ಕೆಟ್ಟದಾಗಿ ಬರೆಯುವವರಿಗೆ ಎಚ್ಚೆರಿಕೆಯನ್ನು ನೀಡಬೇಕಾಗುತ್ತದೆ ಎಂದು ಸತೀಶ್ ಗುಡುಗಿದ್ದಾರೆ.

ಮಾಧ್ಯಮಗಳಿಗೂ ಧನ್ಯವಾದ ಹೇಳಿ ನಂತರ ಮನವಿ ಮಾಡಿಕೊಂಡಿರುವ ಸತೀಶ್ ದಯವಿಟ್ಟು ಕನ್ನಡ ಸಿನಿಮಾ ಉಳಿಸಿ. ನಮ್ಮ ನೆಲದಲ್ಲಿ ಬೇರೆಯವರು ಬಂದು ಹಣ ಮಾಡಿಕೊಂಡು ಹೋಗುತ್ತಿದ್ದಾರೆ. ಹೊರ ರಾಜ್ಯದಲ್ಲಿ ಒಂದೇ ಒಂದು ಥಿಯೇಟರ್ ಪಡೆದುಕೊಳ್ಳಬೇಕಾದರೆ 120 ಜನರ ಅನುಮತಿ ಬೇಕು? ಇದು ಯಾವ ನ್ಯಾಯ  ಎಂದು ಪ್ರಶ್ನೆ ಮಾಡಿದ್ದಾರೆ.

ಹಾಗಾದರೆ ನೀನಾಸಂ ಸತೀಶ್ ಏನು ಹೇಳಿದರು... ?