ಇತ್ತೀಚಿಗೆ ಸೆಲ್ಫಿ ಗೀಳು ಹೆಚ್ಚುತ್ತಿದೆ. ಎಲ್ಲಿ ನೋಡಿದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರೇ ಕಾಣಸಿಗುತ್ತಾರೆ. ಈ ಸೆಲ್ಫಿ ಹುಚ್ಚು ಕೆಲವೊಂದು ಭಾರೀ ಅನಾಹುತಗಳಿಗೂ ಕಾರಣವಾಗುತ್ತಿದೆ. ಕೈ ನಲ್ಲಿ ಒಂದು ಮೊಬೈಲ್ ಇದ್ದರೆ ಪ್ರಪಂಚವನ್ನೇ ಮರೆತು ಬಿಡುತ್ತಾರೆ.

ಬಾಲಿವುಡ್​ ನಟಿ ಮೊನಿ ರಾಯ್ ತಮ್ಮ 'ಗೋಲ್ಡ್' ಚಿತ್ರದ ಪ್ರೀಮಿಯರ್ ಶೋಗೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಸೆಲ್ಫಿಗಾಗಿ ದುಂಬಾಲು ಬಿದ್ದಿದ್ದಾರೆ. ನಟಿ ಒಂದೆರಡು ಸೆಲ್ಫಿಗೆ ಫೋಸ್ ಕೊಡುವಷ್ಟರಲ್ಲಿ ಜನಸಂದಣಿಯೇ ಎದುರಾಗಿದ್ದು ಏನು ಮಾಡಬೇಕು ಎಂದು ತೋಚದೆ ಪರದಾಡಿದ್ದಾರೆ.

ಅಂತೂ ಇಂತೂ ತಮ್ಮ ಸ್ನೇಹಿತರ ನೆರವಿನಲ್ಲಿ ಸುರಕ್ಷಿತ ಸ್ಥಳಕ್ಕೆ ನಟಿ ತಲುಪಿವವರೆಗೆ ಸಾಕು ಸಾಕಾಗಿ ಹೋಗಿದೆ. ನಟಿ ಸೆಲ್ಫಿಯಿಂದ ಬಚಾವಾಗಲು ಪಟ್ಟ ಹರಸಾಹಸದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.