ಎಚ್‌ಐವಿ ಪೀಡಿತ ಮಕ್ಕಳಿಗೆ ಬೆಳಕಾದ ಬಂಗಾರದ ಮನುಷ್ಯ, ಪಾಪದ ಕಂದಮ್ಮಗಳ ಮೊಗದಲ್ಲಿ ನಗು ತರಿಸಿದ ಮಹೇಶ್ ಜಾಧವ್

ತಮ್ಮದಲ್ಲದ ತಪ್ಪಿಗೆ ನೋವು ಅನುಭವಿಸುವ ಪಾಪದ ಕಂದಮ್ಮಗಳು ಎಚ್‌ಐವಿ ಪೀಡಿತ ಮಕ್ಕಳು. ಅವರನ್ನು ಪ್ರೀತಿಯಿಂದ ನೋಡಿಕೊಂಡು ಬೆಳೆಸುವುದು ಸಾಮಾನ್ಯ ಕೆಲಸವಲ್ಲ. ಅಂಥಾ ಅಸಾಮಾನ್ಯ ಕೆಲಸವನ್ನು ಮಾಡುತ್ತಿರುವ ಬಂಗಾರದ ಮನುಷ್ಯ ಬೆಳಗಾವಿಯ ಮಹೇಶ ಜಾಧವ್. ಎಚ್‌ಐವಿ ಪೀಡಿತ ಮಕ್ಕಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ತನ್ನವರಂತೆ ಪ್ರೀತಿಸಿ, ಬೆಳೆಸಿ, ಪೋಷಿಸಿ ಕತ್ತಲೆಯಿಂದ ಬೆಳಕಿನೆಡೆಗೆ ಕರೆತರುವ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಮಾತ್ರವಲ್ಲ ೨೦೧೭ರ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಿದ ಮಹನೀಯರಿಗೆ ಕೇಂದ್ರ ಸರಕಾರ ನೀಡುವ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Comments 0
Add Comment