ಸುರುಚಿಕರ ಕತೆಯ ಖಜಾನೆ ವಿಜಯಾ

ಮೖಸೂರಿನಲ್ಲಿ ಸುರುಚಿ ಎನ್ನುವಾ ಕಲಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಿಂಧುವಳ್ಳಿ ಅನಂತಮೂರ್ತಿ ಅವರದ್ದು ಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರ ನಂತರ ಪತ್ನಿ ವಿಜಯಾ ಸಿಂಧುವಳ್ಳಿ ಅವರು ಪತಿಯ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಯಶಸ್ವಿಯಾಗಿ ಮುನ್ನಡೆಸಿಕೊಂಡು ಸಾಗುತ್ತಿದ್ದಾರೆ. ಪತಿ ಕಟ್ಟಿದ ಸುರುಚಿ ಸಂಸ್ಥೆಯನ್ನು ’ಕಲಾಸುರುಚಿ’ಯಾಗಿ ಪರಿವರ್ತನೆ ಮಾಡಿ ಮಕ್ಕಳಿಗೆ ಕತೆ ಹೇಳುವ, ರಂಗಾಶಕ್ತರಿಗೆ ತರಬೇತಿ ನೀಡುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಪ್ರಾರಂಭದಲ್ಲಿ ಕಲೆಯ ಬಗ್ಗೆಒಲವೇ ಹೊಂದಿದ್ದ ವಿಜಯಾ ಅವರು ಪತಿ ಅನಂತಮೂರ್ತಿಯಿಂದ ಪ್ರೇರೇಪಿತರಾಗಿ ಕಲಾ ಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

Comments 0
Add Comment