ಬಿಕಿನಿ ವಿವಾದದಲ್ಲಿ ಬಿಗ್ ಬಾಸ್ ಸ್ಪರ್ಧಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 4:28 PM IST
Mandana Karimi ; I wear a bikini, and yes, I am a Muslim
Highlights

  • ಟ್ರೋಲಿಗರಿಗೆ ಆಹಾರವಾಗಿದ್ದ  ಬಿಗ್ ಬಸ್ ಸ್ಪರ್ಧಿ ಮಂದನಾ ಕರೀಮಿ ಬಿಕಿನಿ
  • ನನ್ನ ಉಡುಪು, ನನ್ನಿಷ್ಟ ಎಂದು ಖಡಕ್ ಉತ್ತರ ಕೊಟ್ಟ ನಟಿ  

ಮುಂಬೈ[ಜು.30]: ಬಿಗ್ ಬಾಸ್ ನಂತೆ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಇತ್ತೀಚಿಗೆ ವಿವಾದದ ಸಿಲುಕುವುದು ಸಹಜವಾಗಿದೆ. ಕನ್ನಡದಲ್ಲಿ ಹುಚ್ಚ ವೆಂಕಟ್, ಪ್ರಥಮ್ ಸುದ್ದಿಯಾಗಿದ್ದರು.

ಈಗ ಹಿಂದಿಯ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಬಿಕಿನಿ ವಿವಾದಕ್ಕೆ ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲ್ ಗಳ ಬೈಗುಳಗಳಿಗೆ ತುತ್ತಾಗಿದ್ದಾರೆ. ಬಿಗ್ ಬಾಸ್ ನ 9ನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ಮಂದನಾ ಕರೀಮಿ ಬಿಕಿನಿಯೊಂದಿಗೆ ಇದ್ದ ಫೋಟೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು.

ಮುಸ್ಲಿಂ ಸಮುದಾಯದವರಾದ ಮಂದನಾ ಅವರ ಬಿಕಿನಿ ಧರಿಸಿಗೆ ಟ್ರೋಲಿಗರು ತರಾಟೆಗೆ ತೆಗೆದುಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳ ಬೈಗಳಕ್ಕೆ ತಲೆಕೆಡಿಸಿಕೊಳ್ಳದ ಕರೀಮಿ  ’ನೀವು ನನ್ನನ್ನು ಇಷ್ಟಪಡಿ ಅಥವಾ ಪ್ರೀತಿಸಿ ನಾನು ಅಂದುಕೊಂಡಂತೆ ಬದುಕುತ್ತೇನೆ. ನಾನು ಬಿಕಿನಿ ಧರಿಸಿದ್ದೇನೆ. ನನಗೆ ಗೊತ್ತು ನಾನೊಬ್ಬಳು ಮುಸ್ಲಿಮ್ ಸಮುದಾಯದವಳು ಎಂದು. ಇವೆಲ್ಲ ನನ್ನನ್ನು ಕೆಟ್ಟವಳನ್ನಾಗಿ ಮಾಡುವುದಿಲ್ಲ. ಈ ರೀತಿಯ ಟ್ರೋಲ್'ಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆಲ್ಲ ನನ್ನ ನಗುವೇ ಉತ್ತರವಾಗಿರುತ್ತದೆ. ನನ್ನ ಧರಿಸಿನ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ಇದು ನನ್ನ ಖಾಸಗಿ ಬದುಕು' ಎಂದು ಖಡಕ್ ಆಗಿಯೇ ಉತ್ತರ ನೀಡಿದ್ದಾಳೆ.

ಭಾರತೀಯ ತಾಯಿ ಹಾಗೂ ಇರಾನಿ ತಂದೆಗೆ ಜನಿಸಿದ ನಟಿ ಕರೀಮಿ ಹಿಂದಿ ಬಿಗ್ ಬಾಸ್ ನ 9ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಬಾಲಿವುಡ್'ನ ಕೆಲ ಚಿತ್ರಗಳು ಹಾಗೂ ರಿಯಾಲಿಟಿ ಶೋಗಳಲ್ಲೂ ಕರೀಮಿ ನಟಿಸಿದ್ದಾಳೆ.  

 

 

Perfect Sunday ☀️👙 #colombo

A post shared by Mandanakarimiofficial (@mandanakarimi) on Feb 18, 2018 at 4:37am PST

loader