‘ಅವಳು ನನ್ನ ಎರಡನೇ ಅಮ್ಮ. ಪ್ರತೀ ಹೆಜ್ಜೆಯಲ್ಲೂ ನನ್ನ ಮಾರ್ಗದರ್ಶಿ’ ಅನ್ನೋ ಈ ಎಸಳು ಮೂಗಿನ ಹುಡುಗಿ ನಟಿ ಕೃತಿ ಸನೂನ್ ತಂಗಿ, ಹೆಸರು ನೂಪುರ್. ಬಾಲಿವುಡ್‌ನ ಚೊಚ್ಚಲ ಎಂಟ್ರಿಯಲ್ಲೇ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಜೊತೆ ವೀಡಿಯೋ ಸಾಂಗ್‌ನಲ್ಲಿ ಅಭಿನಯಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.

ಮೊನ್ನೆ ಮೊನ್ನೆ ತನ್ನ ಅಕ್ಕ ಕೃತಿ ಜೊತೆಗೆ ತನ್ನ ಒಡನಾಟ, ಫೈಟಿಂಗ್ ಕತೆ ಹೇಳ್ಕೊಂಡ್ಲು.  ‘ನಂಗೊಂದು ಕೆಟ್ಟ ಚಟ. ಅಕ್ಕನವಾರ್ಡ್‌ಡೋಬ್ನಿಂದ ಅವಳ ಡ್ರೆಸ್ ಕದಿಯೋದು ಮತ್ತು ಅದನ್ನು ಮರಳಿಸದೇ ಇರೋದು. ಅವಳ ಡ್ರೆಸ್ ಒಂದೇ ನಂಗಿಷ್ಟ. ಸ್ವಭಾವದಲ್ಲಿ ನಾವಿಬ್ರೂ ಉಲ್ಟಾ..’ ಅನ್ನುತ್ತಾ ಕಣ್ಹೊಡೆದು ನಗುತ್ತಾಳೆ.

‘ಈಗಲೂ ಅಷ್ಟೇ ನಾವಿಬ್ರೂ ಒಂದೇ ಕಾರ್ಯಕ್ರಮಕ್ಕೆ ಹೋದರೂ ಎರಡು ಕಾರಲ್ಲಿ ಮನೆಗೆ ವಾಪಾಸ್ ಬರ‌್ತೀವಿ, ಯಾಕೆಂದರೆ ಅವಳು ಕಾರಲ್ಲಿ ಪ್ಲೇ ಮಾಡೋ ಮ್ಯೂಸಿಕ್ ನಂಗಿಷ್ಟ ಆಗಲ್ಲ. ನಾನು ಪ್ಲೇ ಮಾಡೋದು ಅವಳಿಗಿಷ್ಟ ಆಗಲ್ಲ. ಆಗ ಕಾರಲ್ಲೂ ಕಿತ್ತಾಟ ಶುರುವಾಗುತ್ತೆ. ಅದಕ್ಕೇ ನಾವು ಬೇರೆ ಬೇರೆ ಕಾರಲ್ಲೇ ಓಡಾಡ್ತೀವಿ’ ಅನ್ನೋ ತುಂಟಿಗೆ ಅಕ್ಕನ ಅಕ್ಕರೆ ಭಾಳ ಇಷ್ಟ, ಜಗಳ ಆಡಿದ್ರೂ ಮುದ್ದು ಜಾಸ್ತಿ.