ಹಾರರ್ ಆ್ಯಂಥಾಲಜಿ ‘ಒಂದ್ ಕಥೆ ಹೇಳ್ಲಾ’ ಚಿತ್ರ ಚಂದನವನದಲ್ಲಿ ಸಖತ್ ಸದ್ದು ಮಾಡುತ್ತಿದ್ದು ಎಲ್ಲೆಡೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನಾಲ್ಕು ಉಪಕತೆಗಳುಳ್ಳ ಒಂದು ಕುತೂಹಲಕಾರಿ ಕಥೆ ಇದಾಗಿದ್ದು, ಮನೆಯಲ್ಲಿದ್ದ ಸಂಪ್ ಕ್ಲೀನ್ ಮಾಡಲು ಹೋದಾಗ ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ ಅ ವೇಳೆ ಆಗುವ ಉದ್ವೇಗ, ಆತಂಕ, ಅಯ್ಯೋ ಅನ್ನಿಸುವ ಭಾವ ಸೇರಿ ಕತೆಯೇ ಈ ಚಿತ್ರ.

ಇನ್ನು ಈ ಸಿನಿಮಾ ನೋಡಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಫುಲ್ ಫಿದಾ ಆಗಿದ್ದಾರೆ. ನಟಿ ಕೃಷಿ ತಾಪಂಡ ಹಾಗೂ ನಟ ಡಾಲಿ ಧನಂಜಯ್ ಕೂಡಾ ಈ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದ್ ಕಥೆ ಹೇಳ್ಲಾ ಸಿನಿಮಾದಲ್ಲಿ ಕಾಡುವ ಆ ’ಎನರ್ಜಿ’ ಯಾವುದು?