ಈ ಫೋಟೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೆಜಿಎಫ್‌ 2 ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಯಶ್‌ ಲುಕ್‌ ಹೀಗಿರುತ್ತದೆ ಎಂಬ ಸುದ್ದಿ ಸೋಷಲ್‌ ಮೀಡಿಯಾದಲ್ಲಿ ಓಡಾಡುತ್ತಿತ್ತು. ಆದರೆ ಯಶ್‌ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಈ ಫೋಟೋದಲ್ಲಿರುವುದು ತಾನಲ್ಲ ಎಂದಿದ್ದಾರೆ.

ಕೆಜಿಎಫ್‌ 2 ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಯಶ್‌ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಈಗಲೇ ಈ ಚಿತ್ರದ ಕುರಿತು ನಿರೀಕ್ಷೆ ದುಪ್ಪಟ್ಟಾಗಿದೆ. ಅದರಲ್ಲೂ ಯಶ್‌ ಲುಕ್‌ ಬಗ್ಗೆ ಬಾರಿ ಕುತೂಹಲ ಉಂಟಾಗಿದೆ. ಕನ್ನಡದವರಷ್ಟೇ ಅಲ್ಲ, ಬೇರೆ ರಾಜ್ಯ ಅಭಿಮಾನಿಗಳು ಕೂಡ ಮೇಲಿನ ಫೋಟೋ ಶೇರ್‌ ಮಾಡಿಕೊಂಡು ತಮ್ಮ ಯಶ್‌ ಪ್ರೇಮವನ್ನು ಸಾರಿದ್ದಾರೆ. ಈಗ ಈ ಒರಿಜಿನಲ್‌ ಫೋಟೋ ಯಾರದ್ದು ಅನ್ನುವ ಕುರಿತು ಕುತೂಹಲ ಶುರುವಾಗಿದೆ.