ಬಹುನಿರೀಕ್ಷಿತ ಸಲ್ಮಾನ್ ಖಾನ್, ಕತ್ರಿನಾ ಕೈಫ್ ನಟನೆಯ ‘ಭಾರತ್’ ಸಿನಿಮಾ ಇಂದು ದೇಶಾದ್ಯಂತ ತೆರೆಗೆ ಅಪ್ಪಳಿಸಿದೆ. ಸಲ್ಲು ಬಾಯ್ ಧಮಾಕಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಕತ್ರಿನಾ, ಕುಮುದಾ ರೈನಾ ಪಾತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. 

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಕತ್ರಿನಾ, ನನ್ನ ಸಿನಿ ಕರಿಯರ್ ನಲ್ಲಿ ಇದು ಬೆಸ್ಟ್ ರೋಲ್ ಎಂದಿದ್ದಾರೆ. ಕುಮುದಾ ರೈನಾ ಪಾತ್ರವನ್ನು ಮೊದಲು ಪ್ರಿಯಾಂಕ ಚೋಪ್ರಾ ಮಾಡುವುದು ಎಂದಾಗಿತ್ತು. ಆದರೆ ಪ್ರಿಯಾಂಕ ಕಾರಣಾಂತರದಿಂದ ಸೆಟ್ ನಿಂದ ಹೊರ ನಡೆದರು. ಕೊನೆಗೆ ಆ ಪಾತ್ರ ಮಾಡಲು ಕತ್ರಿನಾ ಒಪ್ಪಿಕೊಂಡರು. ಅದು ಒಂದು ಕಂಡೀಶನ್ ಮೇಲೆ! 

ಪಾತ್ರ ಸ್ಟ್ರಾಂಗ್ ಆಗಿದ್ರೆ ಮಾತ್ರ ನಟಿಸುತ್ತೇನೆ ಎಂದು ಕತ್ರಿನಾ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಗೆ ಕಂಡೀಶನ್ ಹಾಕಿದ್ದರಂತೆ! 

ಕುಮುದಾ ಒಂದು ಚಾಲೆಂಜಿಂಗ್ ರೋಲ್. ಈ ಪಾತ್ರಕ್ಕಾಗಿ ಸಾಕಷ್ಟು ಪ್ರಿಪೇರ್ ಆಗಿದ್ದೆ. ವರ್ಕ್ ಶಾಪ್ ಗಳಲ್ಲಿ ಭಾಗವಹಿಸಿದ್ದೆ. ನನ್ನ ಕರಿಯರ್ ನಲ್ಲೆ ಇದು ಅತ್ಯುತ್ತಮ ಪಾತ್ರ. ಇಂತಹ ಪಾತ್ರ ಮಾಡಲು ನಾನು ಅದೃಷ್ಟ ಮಾಡಿದ್ದೇನೆ ಎಂದಿದ್ದಾರೆ. 

ಭಾರತ್ ಸಿನಿಮಾದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್, ಟಬು, ದಿಶಾ ಪಟಾಣಿ, ಜಾಕಿ ಶ್ರಾಫ್, ಸುನಿಲ್ ಗ್ರೋವರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.