ಖ್ಯಾತ ನಟಿ ಹರಿಪ್ರಿಯಾ ಅಭಿನಯದ ‘ ಸೂಜಿದಾರ’ ಸಿನಿಮ ತೆರೆಗೆ ಬಂದಿದೆ. ಹರಿಪ್ರಿಯಾ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಾರೆ. ಆದರೆ ಸೂಜಿದಾರ ನಿರೀಕ್ಷಿತ ಮಟ್ಟದಲ್ಲಿ ಖುಷಿ ನೀಡಿಲ್ಲ ಎಂದು ಹರಿಪ್ರಿಯಾ ಬೇಸರ ವ್ಯಕ್ತಪಡಿಸಿದ್ದಾರೆ. 

ನೀರ್ದೋಸೆ ಹುಡುಗಿ ‘ಸೂಜಿದಾರ’ ಪೋಣಿಸಲು ರೆಡಿ; ಇಲ್ಲಿವೆ ಫೋಟೋಗಳು

‘ಹಾಯ್, ಮೊದಲೇ ಹೇಳಿ ಬಿಡುತ್ತೇನೆ, ನನ್ನನ್ನು ಕ್ಷಮಿಸಿ. ಎಂದಿನಂತೆ ಚಿತ್ರದ ಬಗ್ಗೆ ಅಭಿಮಾನಿಗಳ ಜೊತೆ ಮಾತನಾಡುವಾಗ ಅವರ ಮಾತು ನನ್ನನ್ನು ಚಿಂತನೆಗೀಡು ಮಾಡಿತು. ನನ್ನಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷೆ ಮಾಡಿದ್ದರು. ಆದರೆ ಅದು ಚಿತ್ರದಲ್ಲಿ ಅದಿರಲಿಲ್ಲ. ಹಾಗಾಗಿ ಥಿಯೇಟರ್ ನಿಂದ ಎದ್ದು ಹೋಗಿದ್ದಾರೆ. ಆದರೆ ನಿಜ ಹೇಳುತ್ತೇನೆ ಅವರು ಹೇಳಿದ್ದ ಕಥೆಯೇ ಬೇರೆ. ಆಮೇಲೆ ಅನಾವಶ್ಯಕ ಕಥೆಯನ್ನು ಸೇರಿಸಿದ್ದಾರೆ. ನನಗೂ ಚಿತ್ರ ನೋಡಿದಾಗ ನಿರಾಸೆಯಾಗಿದೆ. ಅದಕ್ಕಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಇದು ಮುಂದೆಂದೂ ರಿಪೀಟ್ ಆಗುವುದಿಲ್ಲ. ಮುಂಬರುವ ಸಿನಿಮಾಗಳಲ್ಲಿ ನಿಮಗೆ ಮನರಂಜನೆ ನೀಡುತ್ತೇನೆ ’ಎಂದು ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

Hey ppl ... Sorry ... Sorry and Sorry again... My regular fan interaction Sunday turned out to be a thought provoking one instead. Today, a lot of fans and well wishers came home to take selfies as usual but they told me they felt really bad about Soojidhara. They expected to see more of me in Soojidaara and when I wasn’t seen much they had to walk out of the theatre...!!! Frankly speaking that was not the story I was told ... they added some unwanted stuff... I was disappointed when I first watched the movie but kept quiet ... all I wanted was to support a theatre team to make a full fledged feature film... but look what happened... I am extremely sorry from my end... will not repeat the mistake again ... Will make sure I entertain you more in the coming cinemas of mine 🙏🏻

A post shared by Hariprriya (@iamhariprriya) on May 12, 2019 at 4:18am PDT