ಬಾಲಿವುಡ್ ನಟಿ ತಾಪ್ಸಿ ಪನ್ನು, ಸ್ವರಾ ಭಾಸ್ಕರ್, ರಿಚಾ ಚಡ್ಡಾ ಅವರನ್ನು ಬಿ ಗ್ರೇಡ್ ನಟಿಯರು ಎಂದು ಕರೆದ ಕ್ವೀನ್ ಕಂಗನಾ ನಿರ್ಮಾಪಕರಿಂದ ಹಣ ಬರಲಿರುವುದರಿಂದಲೇ ತನ್ನನ್ನು ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಹೊರಗಿನವರಾಗಿದ್ದು, ಬಾಲಿವುಡ್‌ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಈ ನಟಿಯರು ತನ್ನನ್ಯಾಕೆ ಬೆಂಬಲಿಸುತ್ತಿಲ್ಲ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ನಟಿಯರಿಗೆಲ್ಲ ನಿರ್ಮಾಪಕರು ಹಣ ಕೊಡುವುದು ಬಾಕಿ ಇದೆ. ಹಾಗಾಗಿ ಯಾರೂ ನನ್ನನ್ನು ಬೆಂಬಲಿಸುತ್ತಿಲ್ಲ ಎಂದಿದ್ದಾರೆ.

ಪತ್ನಿ ಕರೀನಾ, ಮಗ ತೈಮೂರ್ ಜೊತೆ ದೊಡ್ಡ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗ್ತಿದ್ದಾರೆ ಸೈಫ್

ಇದು ತುಂಬ ಬೇಸರದ ವಿಷಯ. ನಾನು ಅವರ ಸ್ಥಾನದಲ್ಲಿದ್ದೆ. ನನಗೇನು ಹೇಳಬೇಕೋ ಗೊತ್ತಾಗ್ತಿಲ್ಲ. ನಾವು ಹೊರಗಿನವರಿಗೆ ನಮ್ಮ ಪೋಷಕರ ಅನುಕೂಲಗಳಿಲ್ಲ. ನಾನು ಅನಿಲ್ ಕಪೂರ್ ಅಥವಾ ಮಹೇಶ್ ಭಟ್ ಮಗಳಲ್ಲ ಎಂದಿದ್ದಾರೆ.

ಸ್ವರಾ ಭಾಸ್ಕರ್, ತಾಪ್ಸಿ, ರಿಚಾ ಅವರಿಗೆ ಮನೆಯ ಬಿಲ್ ಪಾವತಿಸುವುದಕ್ಕಿರುತ್ತದೆ. ಎಲ್ಲರೂ ನಾನು ಬದುಕಲು ಬಯಸುವಂತೆ ಆಶಿಸುವುದಿಲ್ಲ. ಅವರು ಬರುವ ಸ್ಥಳದಲ್ಲಿ ಅವರಿಗೆ ಹೆಚ್ಚಿನ ಒತ್ತಡವಿರುತ್ತದೆ. ನಾನದನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದಿದ್ದಾರೆ.

ಸ್ಟಾರ್ ಕಿಡ್ಸ್ ಅನುಕೂಲ, ಬಾಲಿವುಡ್ ನೆಪೊಟಿಸಂ ಬಗ್ಗೆ ತಾಪ್ಸಿ ರಿಯಾಕ್ಷನ್..!

ಬಾಲಿವುಡ್ ಅಸಮಾನತೆ ಟೀಕಿಸುವುದರಿಂದ ನನಗೆ ಶತ್ರುಗಳು ಸಿಗುವುದಲ್ಲದೆ ಬೇರೇನೂ ಸಿಗುವುದಿಲ್ಲ. ನನ್ನ ನೆಪೊಟಿಸಂ ನಿಲುವು ಸುಳ್ಳು ಎನ್ನುತ್ತಾರೆ ಸ್ವರಾ. ರಿಚಾ ಜನ ಜಗತ್ತಿಗೆ ಘಾನಾತ್ಮಕ ವಿಚಾರ ಕೊಡುತ್ತಿಲ್ಲ ಎನ್ನುತ್ತಾರೆ ಎಂದಿದ್ದಾರೆ ಕಂಗನಾ. ಇತ್ತೀಚೆಗಷ್ಟೇ ಕಂಗನಾ ತಾಪ್ಸಿ, ರಿಚಾ, ಸ್ವರಾ ಅವರನ್ನು ನೀಡಿ ಔಟ್‌ ಸೈಡರ್ಸ್ ಎಂದು ಹೇಳಿದ್ದು ಸುದ್ದಿಯಾಗಿತ್ತು.