AI ಕುರಿತಾಗಿ 1984ರಲ್ಲಿಯೇ ನಾನು ಎಚ್ಚರಿಸಿದ್ದೆ ಎಂದ ಜೇಮ್ಸ್ ಕ್ಯಾಮರೂನ್!
ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಜೇಮ್ಸ್ ಕಾಮರೂನ್, ಮಾನವ ಜಗತ್ತಿಗೆ ಎಐ ಒಡ್ಡಬಹುದಾದ ಸವಾಲಿನ ಬಗ್ಗೆ ನಾನು 1984ರಲ್ಲಿಯೇ ಎಚ್ಚರಿಸಿದ್ದೆ. ಆದರೆ, ಯಾರೂ ಕೂಡ ಅಂದು ನನ್ನ ಮಾತು ಕೇಳಿರಲಿಲ್ಲ ಎಂದಿದ್ದಾರೆ.
ನವದೆಹಲಿ (ಜು.22): ಇಂದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಾನವನ ಕೆಲಸವನ್ನು ಕಸಿಯುತ್ತಿದೆ. ಹಾಲಿವುಡ್‌ಗೆ ಈಗಾಗಲೇ ಇದರ ಬಿಸಿ ಮುಟ್ಟಿದ್ದು ಈಗಾಗಲೇ ಈ ಕುರಿತಾಗಿ ಪ್ರತಿಭಟನೆಗಳೂ ಆರಂಭವಾಗಿದೆ. ಈ ನಡುವೆ ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಿರ್ದೇಶಕ, ದಿ ಟರ್ಮಿನೇಟರ್, ಟೈಟಾನಿಕ್ ಹಾಗೂ ಅವತಾರ್‌ನಂಥ ದೃಶ್ಯಕಾವ್ಯಗಳ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿರುವ ಜೇಮ್ಸ್ ಕ್ಯಾಮರೂನ್, ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಾನವೀಯತೆಗೆ ಗಂಭೀರ ಅಪಾಯವನ್ನು ಒಡ್ಡುತ್ತದೆ ಎನ್ನುವ ತಜ್ಞರ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಹೇಳಿದ್ದು, 1984ರಲ್ಲಿ ನಾನೇ ನಿರ್ದೇಶನ ಮಾಡಿದ್ದ ಟರ್ಮಿನೇಟರ್ ಚಿತ್ರದಲ್ಲಿ ಎಐ ಬಗ್ಗೆ ಎಚ್ಚರಿಕೆ ನೀಡಿದ್ದೆ. ಆದರೆ, ಅಂದು ನನ್ನ ಮಾತನ್ನು ಯಾರೂ ಕೇಳಿರಲಿಲ್ಲ ಎಂದಿದ್ದಾರೆ. 'ತಜ್ಞರ ಕಾಳಜಿಯನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳಯತ್ತೇನೆ. 1984 ರಲ್ಲಿ ನಾನು ನಿಮಗೆ ಎಚ್ಚರಿಕೆ ನೀಡಿದ್ದೆ, ಆದರೆ ನೀವು ಕೇಳಲಿಲ್ಲ' ಎಂದು 1984ರಲ್ಲಿ ತಾವೇ ಚಿತ್ರಕಥೆ ಬರೆದು ಸಹ-ನಿರ್ದೇಶನ ಮಾಡಿದ್ದ ಟರ್ಮಿನೇಟರ್ ಚಿತ್ರವನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.
ಅದರಲ್ಲೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೈಯಲ್ಲಿ ಆಯುಧವನ್ನು ನೀಡುವುದು ಇನ್ನಷ್ಟು ದೊಡ್ಡ ಅಪಾಯಯ ಎಂದಿದ್ದಾರೆ. ಎಐ ಜೊತೆಗೆ ನ್ಯೂಕ್ಲಿಯರ್ ರೇಸ್‌ನ ಓಟದಲ್ಲಿ ಮಾನವ ಜನಾಂಗ ಸಮಾನತೆ ಪಡೆಯಬಹುದು. ಆದರೆ, ಮುಂದೊಂದು ದಿನ ಇದು ಖಂಡಿತವಾಗಿ ಉಲ್ಭಣವಾಗುತ್ತದೆ. AI ಯ ಅಭಿವೃದ್ಧಿಯ ಹಿಂದಿನ ಉದ್ದೇಶಗಳನ್ನು ಮೌಲ್ಯಮಾಪನ ಮಾಡುವುದು ನಿರ್ಣಾಯಕವಾಗಿದೆ ಎಂದು ಕ್ಯಾಮರೂನ್ ತಿಳಿಸಿದ್ದಾರೆ. ಮಾನವ ಕುಲವು ಎಐ ಅನ್ನು ಲಾಭಕ್ಕಾಗಿ ಅಭಿವೃದ್ಧಿಪಡಿಸಲಾಗಿದೆಯೇ ಎನ್ನುವುದನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನು ಯಾವ ಕಾರಣಕ್ಕಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಜಗತ್ತಿಗೆ ತಿಳಿಸಬೇಕು ಎಂದಿದ್ದಾರೆ.
'ಅದ್ಭುತವಾದ ಗ್ರಂಥ..' ಒಪೆನ್ಹೈಮರ್ ಚಿತ್ರದ ಸಿದ್ಧತೆಗಾಗಿ ಭಗವದ್ಗೀತೆ ಓದಿದ್ದ ಹಾಲಿವುಡ್ ನಟ ಸಿಲಿಯನ್ ಮರ್ಫಿ
ಹಾಗಿದ್ದರೂ ಬರವಣಿಗೆಯ ಅಥವಾ ಚಿತ್ರಕಥೆಯನ್ನು ಸಿದ್ಧಪಡಿಸುವ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಅಷ್ಟು ವೇಗವಾಗಿ ಒಗ್ಗಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಬರವಣಿಗೆಯ ವಿಚಾರದಲ್ಲಿ ಅದು ಹೇಗೆ ಎಷ್ಟು ಸ್ಪಷ್ಟವಾಗಿ ಬರೆಯಲಾಗಿದೆ ಎನ್ನುವುದಕ್ಕಿಂತ ಕಥೆಯಲ್ಲಿನ ಗುಣಮಟ್ಟ ಮುಖ್ಯವಾಗಿದೆ. ಇಂಥ ಗುಣಮಟ್ಟ ಬರುವುದು ಮಾನವನ ಬುದ್ಧಿಯಿಂದ ಹೊರತು, ಕೃತಕ ಬುದ್ಧಿಮತ್ತೆಯಿಂದ ಅಲ್ಲ ಎಂದಿದ್ದಾರೆ.
60 ವರ್ಷಗಳಲ್ಲೇ ಹಾಲಿವುಡ್‌ನಲ್ಲಿ ಅತಿದೊಡ್ಡ ಮುಷ್ಕರ, ಬೀದಿಗಿಳಿದ ಬ್ರಾಡ್ ಪಿಟ್, ಜೆನಿಫರ್ ಲಾರೆನ್ಸ್!
ಭವಿಷ್ಯದಲ್ಲಿ ಸಿನಿಮಾರಂಗದ ಮೇಲೆ ಎಐ ಸಂಭಾವ್ಯ ಪ್ರಭಾವ ಬೀರಲಿದೆ ಎಂದು ಕ್ಯಾಮರೂನ್ ಒಪ್ಪಿಕೊಂಡರೂ, ತಮ್ಮ ಚಿತ್ರದ ಸ್ಕ್ರಿಪ್ಟ್‌ಗಳಿಗಾಗಿ ಎಂದಿಗೂ ಎಐಅನ್ನು ಬಳಸಿಕೊಳ್ಳುವುದನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೇನಾದರೂ ಎಐ ತನ್ನ ಚಿತ್ರಕಥೆಯಾಗಿ ಮುಂದಿನ 20 ವರ್ಷಗಳಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಲ್ಲಿ, ಆಗ ಬೇಕಾದರೆ ಎಐ ಅನ್ನು ಸ್ಕ್ರಿಪ್ಟ್‌ಗೆ ಪರಿಗಣನೆ ಮಾಡುವುದಾಗಿ ತಿಳಿಸಿದ್ದಾರೆ.