ಬೆಂಗಳೂರು (ಆ. 14): ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ನಟ ಕೋಮಲ್ ಹಾಗೂ ಅಪರಿಚಿತರ ನಡುವೆ ಮಾತಿನ ಚಕಮಕಿ ನಡೆದಿದ್ದು ಕೋಮಲ್ ಮೇಲೆ ಹಲ್ಲೆ ನಡೆಸಲಾಗಿದೆ.  ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓರ್ವನನ್ನು ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ. 

ಬೆಂಗಳೂರಿನಲ್ಲಿ ನಟ ಕೋಮಲ್ ಮೇಲೆ ಹಲ್ಲೆ, ಬಾಯಲ್ಲಿ ರಕ್ತ

ಈ ಮಧ್ಯೆ ಕೋಮಲ್ ಮೇಲೆ ಯಾರು, ಯಾಕಾಗಿ ಹಲ್ಲೆ ಮಾಡಿರಬಹುದು ಎಂಬ ಊಹಾಪೋಹಗಳು ಶುರುವಾಗಿವೆ. ಕೋಮಲ್ ಹಲ್ಲೆ ಮೇಲೆ ನಟ ಸುದೀಪ್ ಹಲ್ಲೆ ನಡೆಸಿರಬಹುದೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹರಿಬಿಡಲಾಗಿದೆ. ಇದು ಜಗ್ಗೇಶ್ ಗಮನಕ್ಕೆ ಬಂದಿದ್ದು ಕಿಡಿಗೇಡಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. 

 

‘ನನ್ನ ತಮ್ಮನಂತಿರುವ ಸುದೀಪ್ ಹೆಸರನ್ನು ತಂದರೆ ಕ್ಷಮೆಯಿರುವುದಿಲ್ಲ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದಂತದ್ದು. ಬರೆಯುವ ಆಸೆಯಿದ್ದರೆ ಒಳ್ಳೆಯ ವಿಷಯಗಳ ಬಗ್ಗೆ ಬರೆಯಿರಿ. ಕೆಡಿಸದಿರಿ ಮನಗಳ! ಧನ್ಯವಾದಗಳು ಎಂದಿದ್ದಾರೆ.

ಕೋಮಲ್ ಮೇಲೆ ಹಲ್ಲೆ, ಜಗ್ಗೇಶ್ ಹೇಳಿದ ಇನ್‌ ’ಸೈಡ್’ ವಿಚಾರ

ಸುದೀಪ್ ಗೂ -ಕೋಮಲ್ ಗೂ ಏನ್ ಸಂಬಂಧ? 

ಸುದೀಪ್ ಕೆಂಪೇಗೌಡ ಸಿನಿಮಾ ಮಾಡಿದ್ದರು. ಕೆಂಪೇಗೌಡ -2 ನ್ನು ಅವರೇ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ನಿರ್ಮಾಪಕ ಶಂಕರ್ ಗೌಡ - ಸುದೀಪ್ ನಡುವಿನ ಮುನಿಸಿನಿಂದ ಅದು ಸಾಧ್ಯವಾಗಲಿಲ್ಲ. ಕೋಮಲ್ ಕೇಂಪೇಗೌಡ-2 ನ್ನು ಮಾಡಿದರು. ಇದೇ ಮುನಿಸಿನಿಂದ ಸುದೀಪ್, ಕೋಮಲ್ ಮೇಲೆ ಹಲ್ಲೆ ಮಾಡಿಸಿದ್ದಾರೆಂದು ಲಿಂಕ್ ಮಾಡಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದು ತಿಳಿದಿಲ್ಲ. ವಿಚಾರಣೆ ಬಳಿಕ ನಿಜಾಂಶ ಹೊರಬರಲಿದೆ.