ಬಡ ಕ್ರೀಡಾಪಟುಗಳಿಗಾಗಿ ಸ್ಟೇಡಿಯಂ ಕಟ್ಟಿದ ಪೊನ್ನಪ್ಪ

ಮನೆಮಗ ತೀರಿಕೊಂಡಿದ್ದಾನೆ. ಅದರೆ ಅವನ ಕನಸು ಸಾಯಬಾರದು. ಅವನು ಬೇರೆ ಮಕ್ಕಳ ಸಾಧನೆ ಮೂಲಕ ನಮ್ಮ ನಡುವಲ್ಲೇ ಇರಬೇಕು ಎಂದುಕೊಂಡು ಕೋಟ್ಯಂತರ ರುಪಾಯಿ ಬೆಲೆ ಬಾಳುವ ಭೂಮಿಯಲ್ಲಿ ಕೋಟಿ ರುಪಾಯಿ ತಮ್ಮದೇ ಸ್ವಂತ ಹಣವನ್ನು ಹೂಡಿ ಬಡ ಕ್ರೀಡಾಪಟುಗಳಿಗೆ ನೆರವಾಗುತ್ತಿದೆ ಐಚೆಟ್ಟಿರ ಪೊನ್ನಪ್ಪ ಕುಟುಂಬ. ತಮ್ಮನ ಮೇಲಿನ ಪ್ರೀತಿಯಿಂದ ಸ್ವಂತ ಉದ್ಯೋಗವನ್ನೂ ತೊರೆದು ಕ್ರೀಡಾಂಗಣ ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿರುವ ಪೊನ್ನಪ್ಪ ನಮ್ಮ ನಡುವಿನ ‘ಅಸಾಮಾನ್ಯ ಕನ್ನಡಿಗ’.

Comments 0
Add Comment