ಅಮೀರ್ ಖಾನ್ ಪುತ್ರನ ‘ಮಹಾರಾಜ್’ ಚಿತ್ರಕ್ಕೆ ಹೈಕೋರ್ಟ್ ತಡೆ
ನ್ಯಾಯಾಲಯ ವಿಚಾರಣೆ ನಡೆಸಿ ಚಿತ್ರ ಬಿಡುಗಡೆಗೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಜೂ.18ಕ್ಕೆ ಮುಂದೂಡಿದೆ. ಈ ಬೆನ್ನಲ್ಲೇ ಚಿತ್ರ ನಿರ್ಮಾಪಕರು ಸ್ಪಷ್ಟನೆ ನೀಡಿ ಮಾಧ್ಯಮಗಳು ತಮ್ಮ ಚಿತ್ರದ ವಿಮರ್ಶೆಯನ್ನು ಬರೆಯದಂತೆ ವಿನಂತಿಸಿಕೊಂಡಿದ್ದಾರೆ.
ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಪುತ್ರ ಜುನೈದ್ ಅವರ ಚೊಚ್ಚಲ ಚಿತ್ರ ‘ಮಹಾರಾಜ್’ ನೆಟ್‌ಫ್ಲಿಕ್ಸ್ ಸೇರಿದಂತೆ ಯಾವ ಮಾಧ್ಯಮದಲ್ಲೂ ಬಿಡುಗಡೆಯಾಗಬಾರದು ಎಂದು ಗುಜರಾತ್ ಹೈಕೋರ್ಟ್ ತಡೆ ನೀಡಿದೆ.
ಜೂ.14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಮಹಾರಾಜ್ ಚಿತ್ರದಲ್ಲಿ ವೈಷ್ಣವರ ಭಾವನೆಗೆ ಧಕ್ಕೆ ಉಂಟು ಮಾಡುವಂತಹ ಕಥಾಹಂದರವನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಪುಷ್ಟಿಮಾರ್ಗ ಎಂಬ ವೈಷ್ಣವ ಧಾರ್ಮಿಕ ಪಂಥವು ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು ಮತ್ತು ಚಿತ್ರ ಬಿಡುಗಡೆಗೆ ತಡೆ ಕೋರಿತ್ತು. ನ್ಯಾಯಾಲಯ ವಿಚಾರಣೆ ನಡೆಸಿ ಚಿತ್ರ ಬಿಡುಗಡೆಗೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಜೂ.18ಕ್ಕೆ ಮುಂದೂಡಿದೆ. ಈ ಬೆನ್ನಲ್ಲೇ ಚಿತ್ರ ನಿರ್ಮಾಪಕರು ಸ್ಪಷ್ಟನೆ ನೀಡಿ ಮಾಧ್ಯಮಗಳು ತಮ್ಮ ಚಿತ್ರದ ವಿಮರ್ಶೆಯನ್ನು ಬರೆಯದಂತೆ ವಿನಂತಿಸಿಕೊಂಡಿದ್ದಾರೆ.
ಹೀರೋಗೆ 23 ಬಾರಿ ಕಿಸ್ ಮಾಡಿದ್ದ ಈ ನಟಿಯ ಬಟ್ಟೆ ಉರ್ಫಿಗಿಂತ ಸಿಕ್ಕಾಪಟ್ಟೆ ಖುಲ್ಲಾ ಖುಲ್ಲಾ!
ವಿವಾದ ಏನು?
ಮಹಾರಾಜ್ ಚಿತ್ರವು ಶ್ರೀಕೃಷ್ಣ ತನ್ನ ಮಹಿಳಾ ಭಕ್ತರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವ ದೃಶ್ಯಗಳನ್ನು ಒಳಗೊಂಡಿದೆ ಎಂದು ಅರೋಪಿಸಿ ವೈಷ್ಣವರ ಪುಷ್ಟಿಮಾರ್ಗ ಪಂಥವು ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.