ರಾಮು ನಿರ್ಮಾಣದ ‘99’ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಿದೆ. ಸಿನಿಮಾ ನೋಡಿದವರು ಸೂಪರ್‌ ಎನ್ನುತ್ತಿದ್ದಾರೆ. ತುಂಬಾ ದಿನಗಳ ನಂತರ ಕನ್ನಡಕ್ಕೆ ಒಂದು ಹೊಸ ರೀತಿಯ ಕತೆ ಬಂದಿದೆ ಎನ್ನುವ ಮಾತುಗಳು ಸಿನಿಮಾ ನೋಡುಗರಿಂದ ಕೇಳಿಬರುತ್ತಿದೆ. ಪ್ರೀತಮ್‌ ಗುಬ್ಬಿ ನಿರ್ದೇಶಿಸಿ, ಗಣೇಶ್‌ ಹಾಗೂ ಭಾವನಾ ಮೆನನ್‌ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಮೂಲಕ ನಿರೀಕ್ಷೆಯ ಗುರಿ ಮುಟ್ಟುತ್ತಿರುವ ಚಿತ್ರದ ನಿರ್ಮಾಪಕ ರಾಮು ಚಿತ್ರದ ಯಶಸ್ಸಿನ ಕುರಿತು ಆಡಿರುವ ಮಾತುಗಳು ಇಲ್ಲಿವೆ.

ಇವಳು ಬರೋವರ್ಗು ಯಶ್ ಹವಾ, ಬಂದ್ಮೇಲೆ ಇವಳದ್ದೇ ಹವಾ!

- ಸದ್ಯ 200 ಕೇಂದ್ರಗಳಲ್ಲಿ ನಮ್ಮ ‘99’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಯಾವುದೇ ಭಾಷೆಯದ್ದಾದರೂ ಸರಿ, ಅದನ್ನು ಕನ್ನಡದಲ್ಲಿ ಕೊಟ್ಟಾಗ ಅದು ಚೆನ್ನಾಗಿದ್ದರೆ ಖಂಡಿತ ಪ್ರೇಕ್ಷಕರು ನೋಡುತ್ತಾರೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ.

- ಕಲೆಕ್ಷನ್‌ ಭಾಗವಾಗಿ ನೋಡುವುದಾದರೆ ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ನಂ.1 ಅಂತ ಹೇಳಬಹುದು. ಬಿಸಿ ಸೆಂಟರ್‌ಗಳಲ್ಲಿ ಈ ಸಿನಿಮಾ ಹೋಗಲ್ಲ ಎನ್ನುತ್ತಿದ್ದವರಿಗೆ ಉತ್ತರ ಕೊಟ್ಟಿದ್ದಾರೆ ಗಣೇಶ್‌. ಈ ಚಿತ್ರದ ಮುಖ್ಯ ಹೈಲೈಟ್‌ ಚಿತ್ರದ ಜೋಡಿ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಭಾವನಾ ಜೋಡಿ ಸೂಪರ್‌.

ಸ್ವಿಮ್ ಮಾಡಿ ತಂಪಾಗಲು ಹೊರಟ ಸನ್ನಿಯ ಬಿಸಿ ಹೆಚ್ಚಿಸುವ ಪೋಸ್!

- ಕ್ರಿಕೆಟ್‌, ರಾಜಕಾರಣದ ನಡುವೆಯೂ ‘99’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ ಎಂದರೆ ಅದಕ್ಕೆ ಕಾರಣ ಇದೊಂದು ಅಪ್ಪಟ ಫ್ಯಾಮಿಲಿ ಸಿನಿಮಾ. ಕುಟುಂಬ ಸಮೇತರಾಗಿ ನೋಡುವಂತಹ ಸನ್ನಿವೇಶಗಳು, ಪಾತ್ರಗಳು, ಸಂಭಾಷಣೆಗಳು ಚಿತ್ರದಲ್ಲಿವೆ. ಯಾವುದೇ ರೀತಿಯ ವಲ್ಗಾರಿಟಿ ಇಲ್ಲ. ಶುದ್ಧವಾದ ಕನ್ನಡ ಸಿನಿಮಾ ಇದು.

- ತಮಿಳಿನ ‘96’ ಚಿತ್ರವನ್ನು ನಾನೇ ಕನ್ನಡದಲ್ಲಿ ವಿತರಣೆ ಮಾಡಿದ್ದೆ. ವಿತರಕನಾಗಿ ಆ ಚಿತ್ರ ನೋಡಿದಾಗ ಕತೆ ತುಂಬಾ ಚೆನ್ನಾಗಿದೆ. ಇದು ಎಲ್ಲ ಭಾಷಿಕರಿಗೂ ತಲುಪಬೇಕು ಅನಿಸಿತು. ಆದರೆ, ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಈ ಚಿತ್ರವನ್ನು ನೋಡಲಿಲ್ಲ. ಆದರೆ, ಒಂದು ಒಳ್ಳೆಯ ಕತೆ ನಮ್ಮವರಿಗೆ ಮಿಸ್‌ ಆಗದಿರಲಿ ಎನ್ನುವ ಕಾರಣಕ್ಕೆ ‘96’ ಅನ್ನು ಕನ್ನಡದಲ್ಲಿ ‘99’ ಹೆಸರಿನಲ್ಲಿ ನಾನೇ ರೀಮೇಕ್‌ ಮಾಡಿದೆ.

- ಈ ಚಿತ್ರವನ್ನು ನೋಡಿದವರು ಒಳ್ಳೆಯ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಮುಖ್ಯವಾಗಿ ಮಲೆನಾಡಿನ ಭಾಗದಲ್ಲಿ ತೆರೆದುಕೊಳ್ಳುವ ಪ್ರೇಮ ಕತೆ. ತುಂಬಾ ವರ್ಷಗಳ ನಂತರ ನಾಯಕ- ನಾಯಕಿ ಭೇಟಿ ಆಗುವಾಗ ಗಣೇಶ್‌ ಅವರ ನಟನೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಆಪ್ತವಾಗಿರುವ ಸೈಲೆಂಟ್‌ ಚಿತ್ರವನ್ನು ಕೊಟ್ಟಿದ್ದಾರೆಂಬುದು ನೋಡುಗರ ಮೆಚ್ಚುಗೆ.

- ನನ್ನ ನಿರ್ಮಾಣದ ಸಿನಿಮಾಗಳು ಎಂದರೆ ಕೇವಲ ಆ್ಯಕ್ಷನ್‌ ಕತೆಗಳು ಎಂಬುದು ತಪ್ಪು. ನನಗೆ ಎಲ್ಲ ರೀತಿಯ ಚಿತ್ರಗಳನ್ನು ನಿರ್ಮಿಸುವಾಸೆ ಇದೆ. ಹೀಗಾಗಿ ‘99’ ಚಿತ್ರವನ್ನು ಕನ್ನಡಕ್ಕೆ ತಂದೆ. ಕತೆಯ ಮೂಲಕ ಕಾರಣ ರೀಮೇಕ್‌ ಮಾಡುವುದಕ್ಕೆ. ಯಾಕೆಂದರೆ ರೆಗ್ಯುಲರ್‌ ಕಮರ್ಷಿಯಲ್‌ ಚಿತ್ರಗಳ ಆಚೆಗೆ ನಿಂತು ಈ ಚಿತ್ರವನ್ನು ನೋಡಬೇಕು.

ಮಜಾ ಟಾಕೀಸ್ ರಾಣಿಯ ಮಸ್ತ್-ಮಸ್ತ್ ಫೋಟೋಸ್!

- ರೀಮೇಕ್‌ ಎಂದ ಮಾತ್ರ ಯಥಾವತ್ತಾಗಿ ತಂದಿಲ್ಲ. ಕತೆಯ ಸಾಲು ಎತ್ತಿಕೊಂಡು ಕನ್ನಡಕ್ಕೆ ತಕ್ಕಂತೆ ಮಾಡಿದ್ದೇವೆ. ಇನ್ನೂ ಹೈಸ್ಕೂಲ್‌ ಕತೆಗಳನ್ನು ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಭಾಗದ ಹಿನ್ನೆಲೆಯಲ್ಲಿ ಹೇಳುವ ಪ್ರೀತಿಸಿದ ಹುಡುಗಿಯನ್ನು ತ್ಯಾಗ ಮಾಡುವವರು ಎನ್ನುವಂತೆ ತೋರಿಸುತ್ತಿದ್ದಾರೆ ಎನ್ನುವ ಮಾತುಗಳನ್ನು ನಾನೂ ಕೇಳಿದ್ದೇನೆ. ‘ಆಟೋಗ್ರಾಫ್‌’ ನಂತರ ನಮ್ಮ ‘99’ ಚಿತ್ರ ಎನ್ನುತ್ತಿದ್ದಾರೆ. ನಮಗೆ ಯಾವುದೇ ಪೂರ್ವಗ್ರಹವಿಲ್ಲ. ಕತೆಯ ಆಪ್ತತೆಗೆ ಆ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ.

- ಇದು ಅರ್ಜುನ್‌ ಜನ್ಯಾ ಸಂಗೀತ ನೀಡಿರುವ 100ನೇ ಸಿನಿಮಾ. ಹೀಗಾಗಿ ಮ್ಯೂಸಿಕಲ್ಲಾಗಿಯೂ ಹಿಟ್‌ ಆಗಿದೆ. ಸಿನಿಮಾ ಕೂಡ ಅದೇ ರೀತಿಯ ದಿನೇ ದಿನೇ ಕಲೆಕ್ಷನ್‌ ಹೆಚ್ಚು ಮಾಡುತ್ತಿದೆ. ರಾಜಕೀಯದ ಸದ್ದುಗಳ ನಡುವೆಯೂ ಒಂದು ಕನ್ನಡ ಸಿನಿಮಾ ಯಶಸ್ಸಿನತ್ತ ದಾಪುಗಾಲಿಟ್ಟಿರುವುದು ಸಂತಸ ತಂದಿದೆ.

- ಈ ಚಿತ್ರದ ನಂತರ ಪ್ರಜ್ವಲ್‌ ದೇವರಾಜ್‌ ನಟನೆಯ ‘ಅರ್ಜುನ್‌ ಗೌಡ’ ಸಿನಿಮಾ ತೆರೆಗೆ ಬರಲಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಲಕ್ಕಿ ಶಂಕರ್‌ ಈ ಚಿತ್ರದ ನಿರ್ದೇಶಕರು.