Asianet Suvarna News Asianet Suvarna News

ಕೊರೋನಾ ಕುರಿತ‌ ವಿಶ್ವದ ಮೊದಲ ಸಿನಿಮಾ ಟ್ರೈಲರ್‌ಗೆ 48 ಗಂಟೆಯಲ್ಲಿ 300 ಲಕ್ಷ ವ್ಯೂ

ಕೊರೋನಾ ವೈರಸ್‌ ಬಗ್ಗೆ ಸಿನಿಮಾ ಪಕ್ಕಾ ರೆಡಿಯಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದ್ರೆ ಯಾರು ಮಾಡ್ತಾರೆ..? ಹಾಲಿವುಡ್‌ನಲ್ಲಿ ಬರುತ್ತಾ..? ಭಾರತದಲ್ಲೇ ಈ ಬಗ್ಗೆ ಚಿತ್ರ ನಿರ್ಮಸ್ತಾರಾ ಅನ್ನೋ ಬಗ್ಗೆ ಐಡಿಯಾ ಇರಲಿಲ್ಲ. ಅಂತೂ ಇಂತೂ ಕೊರೋನಾ ಮುಗಿಯೋ ಮುನ್ನವೇ ಸಿನಿಮಾ ರೆಡಿಯಾಗಿದೆ. ಇಲ್ಲಿದೆ ಕೊರೋನಾ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ವಿಚಾರ.

First movie on COVID19 is ready in Tollywood
Author
Bangalore, First Published May 27, 2020, 7:07 PM IST

ಕೊರೋನಾ ವೈರಸ್‌ ಬಗ್ಗೆ ಸಿನಿಮಾ ಪಕ್ಕಾ ರೆಡಿಯಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದ್ರೆ ಯಾರು ಮಾಡ್ತಾರೆ..? ಹಾಲಿವುಡ್‌ನಲ್ಲಿ ಬರುತ್ತಾ..? ಭಾರತದಲ್ಲೇ ಈ ಬಗ್ಗೆ ಚಿತ್ರ ನಿರ್ಮಸ್ತಾರಾ ಅನ್ನೋ ಬಗ್ಗೆ ಐಡಿಯಾ ಇರಲಿಲ್ಲ. ಅಂತೂ ಇಂತೂ ಕೊರೋನಾ ಮುಗಿಯೋ ಮುನ್ನವೇ ಸಿನಿಮಾ ರೆಡಿಯಾಗಿದೆ. ಟೀಸರ್‌ಗೆ 48 ಗಂಟೆಯಲ್ಲಿ ಸುಮಾರು 300 ಲಕ್ಷಕ್ಕೂ ಅಧಿಕ ವ್ಯೂಸ್‌ ಬಂದಿದೆ.

ಐಶ್ವರ್ಯಾ ರೈ ಬ್ಯೂಟಿಗೆ ಕಾರಣವಂತೆ ಕೇರಳ ಆಯುರ್ವೇದಿಕ್‌ ಪ್ರಾಡೆಕ್ಟ್‌?

ಕೊರೊನಾ ವೈರಸ್ ಮೇಲೆ ವಿಶ್ವದ ಮೊಟ್ಟ ಮೊದಲ ಸಿನಿಮಾ ರೆಡಿಯಾಗಿದ್ದು, ಕೊರೊನಾ ವೈರಸ್ ಹೆಸರಿನ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಕೊರೋನಾ ತಾಂಡವವನ್ನು ತೆರೆಯ ಮೇಲೆ ಕಾಣಲು ಸಾಧ್ಯವಾಗಲಿದೆ.

ಸಿನಿಮಾ ಮಂದಿ ನೆಲ ಒರೆಸುವುದು, ವರ್ಕೌಟ್, ಅಡುಗೆಯಲ್ಲಿ ಬ್ಯುಸಿಯಾಗಿರುವಾಗ ನಾನೊಂದು ಸಿನಿಮಾ ಮಾಡಿದೆ ಎಂದು ರಾಮ್‌ ಗೋಪಾಲ್‌ ವರ್ಮ ಟ್ವೀಟ್ ಮಾಡಿದ್ದಾರೆ.

ಕೊರೊನಾ ವೈರಸ್ ಫೀಯರ್‌ನ ಕುಟುಂಬದ ಕಥೆ. ರಾಮ್ ಗೋಪಾಲ್ ವರ್ಮಾ ಅವರ ಸ್ಟೈಲ್‌ನಲ್ಲಿಯೇ ಕೊರೊನಾ ವೈರಸ್ ಸಿನಿಮಾ ರೆಡಿ ಆಗಿದೆ. ಲಾಕ್ ಡೌನ್ ಟೈಮ್‌ನಲ್ಲಿಯೇ ಈ ಚಿತ್ರ ನಿರ್ಮಾಣವಾಗಿರುವುದು ವಿಶೇಷ.

ಲಾಕ್‌ಡೌನ್ ನಂತ್ರ ರಾಜಸ್ಥಾನದತ್ತ ದರ್ಶನ್ ಪಯಣ: 'ರಾಜವೀರ ಮದಕರಿ'ಗೆ ಬೃಹತ್ ಸೆಟ್..!

ತೆಲುಗು ಭಾಷೆಯಲ್ಲಿಯೇ ಸಿನಿಮಾ ಸಿದ್ದಗೊಂಡಿದ್ದು, ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಲಾಕ್ ಡೌನ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರದ ಬಗ್ಗೆ ಮಾಹಿತಿಕೊಟ್ಟಿದ್ದಾರೆ. ಲಾಕ್ ಡೌನ್ ಇದ್ದರೂ ಸರಿಯೇ ದೇವರೂ ಬಂದರೂ ಸರಿಯೇ, ಕೊರೊನಾ ಬಂದಿದ್ದರೂ ಸರಿಯೇ, ಕ್ರಿಯೇಟಿವಿಟಿಗೆ ಲಾಕ್ ಡೌನ್ ಆಗೋದಿಲ್ಲ ಅಂತ ಚಿತ್ರ ತಂಡದ ಕೆಲಸ ಬಣ್ಣಿಸಿದ್ದಾರೆ ಆರ್.ಜಿ.ವಿ.

Follow Us:
Download App:
  • android
  • ios