Asianet Suvarna News Asianet Suvarna News

ಹೊಟೇಲ್ ಮಾಲಿಕ ಕಣ್ಣಿನಲ್ಲೇ ರೇಪ್ ಮಾಡಿದ; ಬಾಲಿವುಡ್ ನಟಿ ಆರೋಪ

ಹೊಟೇಲ್ ಮಾಲಿಕನ ವರ್ತನೆ ಬಗ್ಗೆ ಬಾಲಿವುಡ್ ನಟಿ ಆರೋಪ | ಕಣ್ಣಿನಲ್ಲೇ ರೇಪ್ ಮಾಡಿದ ಎಂದು ಆರೋಪ | ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪೋಸ್ಟ್ 

Esha Gupta lashes out hotel owner raped me with eyes
Author
Bengaluru, First Published Jul 7, 2019, 1:42 PM IST
  • Facebook
  • Twitter
  • Whatsapp

ಹೊಟೇಲ್ ಮಾಲಿಕರೊಬ್ಬರು ನನ್ನನ್ನು ಕಾಮುಕ ದೃಷ್ಟಿಯಿಂದ ನೋಡುತ್ತಾ, ಕಣ್ಣಲ್ಲೇ ರೇಪ್ ಮಾಡುವಂತೆ ದಿಟ್ಟಿಸುತ್ತಿದ್ದರು ಎಂದು ಬಾಲಿವುಡ್ ನಟಿ ಇಶಾ ಗುಪ್ತಾ ಆರೋಪಿಸಿದ್ದಾರೆ. 

ವೈರಲ್‌ ಆಯ್ತು ಕಿರುತೆರೆ ನಟಿ ಬೇಬಿ ಬಂಪ್‌ ಫೋಟೋಸ್!

ಸ್ನೇಹಿತರ ಜೊತೆ ದೆಹಲಿಯ ರೆಸ್ಟೊರೆಂಟ್ ವೊಂದಕ್ಕೆ ಹೋಗಿದ್ದಾಗ ಆ ಹೊಟೇಲ್ ಓನರ್ ರೋಹಿತ್ ವಿಗ್ ಬಹಳ ಹೊತ್ತು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ಇದು ನನಗೆ ಇರುಸುಮುರುಸಾಯಿತು. ನನ್ನ ಬಾಡಿಗಾರ್ಡ್ ಗೆ ತಿಳಿಸಿದೆ ಎಂದು ಇಶಾ ಗುಪ್ತಾ ಹೇಳಿದ್ದಾರೆ. 

 

ಈ ಘಟನೆಯನ್ನು ಇಶಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೊಟೇಲ್ ಮಾಲೀಕನನ್ನು Future Rapist ಎಂದು ಕರೆದಿದ್ದಾರೆ. ಜೊತೆಗೆ ಮಹಿಳಾ ಸೇಫ್ಟಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. 

ಇನ್ನು ಮುಂದುವರೆದು ಆ ವ್ಯಕ್ತಿ ನನ್ನನ್ನು ಮುಟ್ಟಲಿಲ್ಲ. ಮಾತನಾಡಲಿಲ್ಲ. ಆದರೆ ನನ್ನನ್ನು ದಿಟ್ಟಿಸಿ ನೋಡುತ್ತಿದ್ದುದೇ ರೇಪ್ ಮಾಡಿದಂಗಿತ್ತು ಎಂದಿದ್ದಾರೆ. 

Follow Us:
Download App:
  • android
  • ios