ಮುಂಬೈ(ಫೆ. 23)  ಹಿಂದಿ ಟೆಲಿವಿಶನ್ ಕ್ಷೇತ್ರದ ದೈತ್ಯ ನಿರ್ಮಾಪಕಿ ಎಂದೇ ಕರೆಸಿಕೊಂಡಿರುವ ಏಕ್ತಾ ಕಪೂರ್ ಟ್ರೋಲ್‌ ಗೆ ಆಹಾರವಾಗಿದ್ದಾರೆ. ದೇವಾಲಯವೊಂದರಲ್ಲಿ ಏಕ್ತಾ ಕಪೂರ್ ಭಿಕ್ಷುಕರಿಗೆ ಬಾಳೆಹಣ್ಣು ನೀಡಿದ ರೀತಿ ಟ್ರೋಲ್ ಗೆ ಗುರಿಯಾಗಿದೆ.  ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ಇಸ್ಟಾದಲ್ಲಿ ವ್ಯಕ್ತಿಯೊನಬ್ಬರು ಹಂಚಿಕೊಂಡ ವಿಡಿಯೋ ಟ್ರೋಲ್ ಗೆ ಆಹಾರ ಒದಗಿಸಿದೆ. ಒಂದು ಕಡೆ ಬಡವರಿಗೆ ಹಣ್ಣು ವಿತರಣೆ ಮಾಡುತ್ತಇನ್ನೊಂದು ಕಡೆ ಪೋಟೋಕ್ಕೆ ಪೋಸು ಕೊಡಲು ಮುಂದಾಗಿದ್ದಾರೆ.

ದಿಶಾ ಪಟಾಣಿ ಹೊಸ ವೇಷ ನೋಡ್ರಣ್ಣ

ಹಣ್ಣುಗಳನ್ನು ಒಬ್ಬೊಬ್ಬರಿಗೆ ನೀಡುತ್ತ ಬಂದ ಕಪೂರ್ ಎಸೆದ ರೀತಿಯಲ್ಲೇ ಕಾಣುತ್ತದೆ. ಈ ವಿಡಿಯೋಕ್ಕೆ ಕಮೆಂಟ್ ಗಳು ಬಂದಿದ್ದು ಬಡವರಿಗೆ ಬಾಳೆಹಣ್ಣು ನೀಡುವುದನ್ನು ಏಕ್ತಾ ಕಪೂರ್ ನೋಡಿ ಕಲಿಯಬೇಕು ಎಂದು ವ್ಯಂಗ್ಯವಾಡಿದ್ದಾರೆ.