'ದಿಲ್ ಬಿಚಾರ' ಮೂವಿ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ. ಸಿನಿಮಾ ಟ್ರೈಲರ್ ಹಾಗೂ ಹಾಡು ಕೂಡಾ ಹಿಟ್ ಆಗಿತ್ತು. ಇದೀಗ ಸಿನಿಮಾ ನೋಡಿದ ಪ್ರಮುಖರು ಸುಶಾಂತ್ ಸಿಂಗ್ ನಟನೆ ಮೆಚ್ಚಿ ಕಮೆಂಟ್ ಮಾಡಿದ್ದಾರೆ.

'ಕಾಯ್‌ ಪೋ ಚೆ' ಸಿನಿಮಾದಲ್ಲಿ ಸುಶಾಂತ್‌ ಜೊತೆ ತೆರೆ ಹಂಚಿಕೊಂಡಿದ್ದ ರಾಜ್‌ಕುಮಾರ್ ರಾವ್ 'ದಿಲ್ ಬಿಚಾರ' ಸಿನಿಮಾ ನೋಡಿ ಸುಶಾಂತ್ ಸೂಪರ್‌ಸ್ಟಾರ್ ಎಂದು ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ನೋಡಿ ನನ್ನ ಮನಸ್ಸು ಮತ್ತೊಮ್ಮೆ ಒಡೆದು ಹೋಯಿತು ಎಂದು ಹೇಳಿದ್ದಾರೆ ರಾಜ್‌ಕುಮಾರ್ ರಾವ್.

ಬಾಲಿವುಡ್ ನೆಪೊಟಿಸಂ: ಕ್ವೀನ್ ಕಂಗನಾ ಸಪೋರ್ಟ್‌ಗೆ ನಿಂತ ಸೋನು..!

ಸಿನಿಮಾ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದ ರಾಜ್‌ಕುಮಾರ್, ದಿಲ್ ಬಿಚಾರ ನನ್ನ ಮನಸ್ಸನ್ನು ಮತ್ತೊಮ್ಮೆ ಚೂರು ಮಾಡಿತು. ಅದು ಒಂದು ಸುಂದರವಾದ, ಭಾವುಕ ಚಿತ್ರ. ಸುಶಾಂತ್ ಅದ್ಭುತವಾಗಿ ನಟಿಸಿದ್ದಾರೆ. ಅವರ ಉತ್ಸಾಹ ಮತ್ತು ಸುಂದರ ನಗು, ನಮ್ಮ ಸೂಪರ್‌ಸ್ಟಾರ್ ಎಂದು ಬರೆದಿದ್ದಾರೆ.

ನಿರ್ದೇಶಕ ಮುಕೇಶ್ ಛಬ್ರಾ ರಾಜ್‌ಕುಮಾರ್ ಪೋಸ್ಟ್‌ಗೆ ಕಲೆವು ಹಾರ್ಟ್ ಡಿಯಾಕ್ಟ್ ಮಾಡಿದ್ದಾರೆ. ಒಟ್ಟಾದ ಭಾನೆಗಳೊಂದಿಗೆ ಸಿನಿಮಾ ನೋಡಿದೆ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. 

ಅವಕಾಶಕ್ಕಾಗಿ ಅಲೆದಿದ್ರು ಸೋನು ಸೂದ್: ರಿಯಲ್ ಹಿರೋ ಬಾಲಿವುಡ್ ನೆಪೊಟಿಸಂ ಬಗ್ಗೆ ಹೇಳಿದ್ದಿಷ್ಟು

ನಟ ರಣವೀರ್ ಶೋರೆ ಅವರು ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ಈಗಷ್ಟೇ ದಿಲ್ ಬಿಚಾರ ನೋಡಿ ಮುಗಿಸಿದೆ. ಕಣ್ಣೊರೆಸಲು ಸಿನಿಮಾ ನಡು ನಡುವೆ ಗ್ಯಾಪ್ ತೆಗೆದುಕೊಂಡೆ ಎನ್ನುವುದನ್ನು ಒಪ್ಪಬೇಕು. ಎಂತಹ ಅಧ್ಬುತ ಪ್ರತಿಭೆಯನ್ನು ನಾವು ಕಳೆದುಕೊಂಡೆವು ಎಂದು ಬರೆದಿದ್ದಾರೆ.

ನಟ ನವಾಜುದ್ದೀನ್ ಶನಿವಾರ ಟ್ವೀಟ್ ಮಾಡಿ. ಎಲ್ಲ ಸಿನಿಮಾ ಪತ್ರಕರ್ತರೂ ಇದೊಂದು ಸಿನಿಮಾವನ್ನು ಟೀಕಿಸದೆ ಬಿಡಬೇಕು. ದಿಲ್ ಬಿಚಾರ ಸಿನಿಮಾವನ್ನು ಸುಶಾಂತ್‌ ಸಿಂಗ್‌ಗೆ ಟ್ರಿಬ್ಯುಟ್ ಎಂದು ಭಾವಿಸಬೇಕು. ಈ ಸಿನಿಮಾವನ್ನು ನಾವೆಲ್ಲ ಸಂಭ್ರಮಿಸೋಣ ಎಂದಿದ್ದಾರೆ.