ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿ ಆಗಿರುವ ದರ್ಶನ್‌ಗೆ ಯುವತಿಯೊಬ್ಬಳು ಡೈಲಾಗ್ ಕೇಳಿದ್ದಕ್ಕೆ ದರ್ಶನ್ ಕೊಟ್ಟ ಉತ್ತರವಿದು....

ಮಂಡ್ಯ ಲೋಕಸಭಾ ಚುನಾವಣೆ 2019 ರೋಡ್ ಶೋ ನಡೆಸುತ್ತಿರುವಾಗ ದರ್ಶನ್ ಅಭಿಮಾನಿಗಳು ಒಂದೊಂದು ಕೋರಿಕೆಯನ್ನು ಮುಂದಿಡುತ್ತಿದ್ದಾರೆ. ಉಡುಗೊರೆ ಹಿಡಿದು ಬರುತ್ತಿದ್ದಾರೆ. ದಿನೇ ದಿನೇ ರೋಡ್ ಶೋ ಜನರಲ್ಲಿ ಹಾಗೂ ಮಾಧ್ಯಮಗಳಲ್ಲಿ ವಿಪರೀತ ಕುತೂಹಲ ಹೆಚ್ಚಿಸಿದೆ.

ಚಾಲೆಂಜಿಂಗ್ ಸ್ಟಾರ್ ಮೈ ಸವರಿದ್ದಕ್ಕೆ ತೃಪ್ತಿಯಾದ ಮಂಡ್ಯದ ಎತ್ತು!

 

ಆ ವೇಳೆ ಯುವತಿಯೊಬ್ಬರು ‘ಸಾರ್ ಒಂದ್ ಡೈಲಾಗ್ ಹೇಳಿ’ ಎಂದು ಕೇಳಿದ್ದಕ್ಕೆ ದರ್ಶನ್ ಕೊಟ್ರೂ ಸ್ಟ್ರಾಂಗ್ ಆ್ಯನ್ಸರ್. ‘ಡೈಲಾಗ್ ಖಂಡಿತಾ ಹೇಳ್ತಿನಿ ಆದರೆ ಡೈಲಾಗ್ ಏನು ನೀವು ಸುಮಲತಾ ಅಮ್ಮಂಗೆ ಓಟ್ ಹಾಕಿ ಗೆಲ್ಲಿಸಿದ್ರೆ ನಿನ್ನ ಜೊತೆ ಡ್ಯುಯೆಟ್ಟೇ ಹಾಡ್ತೀನಿ, ’ ಎಂದಿದ್ದಾರೆ.

ಇದಾದ ನಂತರ ಗಾಯನಹಳ್ಳಿಯ ರೋಡ್ ಶೋನಲ್ಲಿ ಅಭಿಮಾನಿಯೊಬ್ಬ 'ಯಜಮಾನ' ಚಿತ್ರದ ಡೈಲಾಗ್ ಬೇಕೆ ಬೇಕು ಎಂದು ಕೇಳಿದಾಗ ಫೇಮಸ್ ಕ್ಯಾಡ್‌ಬರಿ ಡೈಲಾಗ್ ಹೇಳಿ, ಅಭಿಮಾನಿಗಳನ್ನು ಮನರಂಜಿಸಿದರು.