ಬಿರುಗಾಳಿಗೆ ಬೆಚ್ಚಿಬಿದ್ದ ದಂಡುಪಾಳ್ಯಂ 4 ಚಿತ್ರತಂಡ

ತುಮಕೂರಿನ ಪಾವಗಡದ ಗುಡ್ಡಗಾಡು ಪ್ರದೇಶದಲ್ಲಿ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಏಕಾಏಕಿ ಬೀಸಿದ ಭಾರಿ ಬಿರುಗಾಳಿಗೆ ಸಿಲುಕಿತ್ತು. ಸುಮಾರು ನೂರು ಕಿ.ಮೀ. ವೇಗದಲ್ಲಿ ಬೀಸಿದ ಬೀರುಗಾಳಿಗೆ ಸುತ್ತಮುತ್ತಲಿನ ಮರಗಳು ಧರೆಗುರುಳಿದರೆ ಚಿತ್ರತಂಡ ಕೆಲಸ ಸದಸ್ಯರನ್ನ ತೆಲಾಡಿಸಿ ಬೀಳಿಸಿದೆ. ಈ ವೇಳೆ ತಂಡದ ಒಬ್ಬ ಸದಸ್ಯನ ತಲೆಗೆ ಗಾಳಿಯಲ್ಲಿ ತೇಲಿಬಂದ ಕಲ್ಲು ಹೊಡೆದು ಪೆಟ್ಟಾಗಿದೆ.  
ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುಮನ್  ರಂಗನಾಥ್‌ ಬಿರುಗಾಳಿ ಆರ್ಭಟಕ್ಕೆ ಬೆದರಿಹೋಗಿದ್ದಾರೆ. ಬಿರುಗಾಳಿಯ ಆರ್ಭಟದಿಂದ ಚಿತ್ರತಂಡಕ್ಕೆ ಕೆಲ ನಿಮಿಷಗಳ ಜೀವಭಯ ಉಂಟು ಮಾಡಿದ್ದಂತು ನಿಜ. ಕೊನೆಗೆ ಬಿರುಗಾಳಿ ಕಡಿಮೆಯಾದ ಮೇಲೆ ಚಿತ್ರತಂಡ ಶೂಟಿಂಗ್‌ ಪ್ಯಾಕಪ್‌ ಮಾಡಿದೆ.

Comments 0
Add Comment