ಸ್ಯಾಂಡಲ್‌ ವುಡ್ ಚಮಕ್ ಬೆಡಗಿ ರಶ್ಮಿಕಾ ಮಂದಣ್ಣ ತನ್ನ ನಗುಮುಖದ ಮೂಲಕ ಇಡೀ ಕರ್ನಾಟಕವನ್ನೇ ಬೋಲ್ಡ್ ಮಾಡಿದವರು. ಕರ್ನಾಟಕ ಕ್ರಶ್ ಆಗಿ ಮೆರೆದ ರಶ್ಮಿಕಾ ತರವೆ ಕಾಣುವ ಮತ್ತೊಬ್ಬ ನಟಿ ಈಗ ಕಿರುತೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಈ ಸುಂದರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಇಷ್ಟ ದೇವತೆ' ಧಾರವಾಹಿಯಲ್ಲಿ ವೈದೇವಿ ಪಾತ್ರದ ಮೂಲಕ ಜನರಿಗೆ ಪರಿಚಯವಾಗಲಿದ್ದಾರೆ. ಆದರೆ ಆಕೆ ರಶ್ಮಿಕಾರಂತೆ ಕಾಣುತ್ತಿದ್ದರು, ಅವರ ಸಹೋದರಿಯಲ್ಲ. ಈ ನಟಿಗೂ ರಶ್ಮಿಕಾಗೂ ಸಂಬಂಧವಿಲ್ಲ. ರಶ್ಮಿಕಾಗೆ ಒಬ್ಬಳೇ ಸಹೋದರಿ ಇದ್ದು, ಆಕೆಯಿನ್ನೂ 5 ವರ್ಷದ ಪುಟಾಣಿ.

ನೀವು ಆಕೆಯನ್ನು ನೋಡಬೇಕೆಂದಾದಲ್ಲಿ ಕಲರ್ಸ್ ವಾಹಿನಿ ಈ ಸೀರಿಯಲ್ ಪ್ರೋಮೊ ರಿಲೀಸ್ ಮಾಡಿದ್ದು, ಇಲ್ಲಿ ಆಕೆಯನ್ನು ಕಾಣಬಹುದಾಗಿದೆ.

 

ಅಂದಹಾಗೆ ಇಷ್ಟದೇವತೆ ಧಾರವಾಹಿಯನ್ನು ನಿರ್ದೇಶನ ಮಾಡುತ್ತಿರುವುದು ಪುಟ್ಟಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್. ಇನ್ನು ಮೊದಲ ಬಾರಿಗೆ ಹಿರಿಯ ನಟಿ ಭವ್ಯ ಧಾರಾವಾಹಿಯಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.