ಚಿರಂತನ ಮತ್ತು ದಾನ್ ಉತ್ಸವ್‌ನಿಂದ ಅನ್ಡಿಫೈನ್ಡ್ 2020 ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆನ್‌ಲೈನ್ ಮೂಲಕ ಈ ಇವೆಂಟ್‌ನಲ್ಲಿ ಉಚಿತವಾಗಿ ರಿಜಿಸ್ಟ್ರೇಷನದ ಕೂಡಾ ಮಾಡಿಕೊಳ್ಳಬಹುದು.

ಮನೆಯಲ್ಲೇ ಕುಳಿತು ನಾಟಕ ನೋಡಿ, ಹಿರಿಯ ಕಲಾವಿದರಿಗೆ ನೆರವಾಗಿ..!

5-12, 18-18, ಮತ್ತು 18 ವರ್ಷ ಮೇಲ್ಪಟ್ಟವರಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಇದರಲ್ಲಿ ನಾಟಕ ಅಭಿನಯ, ಹಾಡು, ನೃತ್ಯಕ್ಕೂ ಅವಕಾಶ ಕಲ್ಪಿಸಲಾಗಿದೆ.

ವಿಶೇಷಚೇತನರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಮುಕ್ತ ವೇದಿಕೆ ಇದಾಗಿದ್ದು, ಕಾರ್ಯಕ್ರಮಕ್ಕೆ ತೀರ್ಪುಗಾರರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ನಟಿ ಸುಧಾ ಬೆಳ್ವಾಡಿ, ಪಿಡಿ ಸತೀಶ್ ಚಂದ್ರ, ಅನಿರುದ್ಧ್‌ ಶಾಸ್ತ್ರಿ, ಸೀತಾ ಕೋಟೆ, ದೇವ್ಜನಿ ಸೆನ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ಸಿನಿಮಾ ಆಗಲಿದೆ ಸೈನೈಡ್‌ ಮೋಹನ್ ಕತೆ;ಪೊಲೀಸ್‌ ಆಫೀಸರ್‌ ಆಗಿ ಪ್ರಿಯಾಮಣಿ!

ಅಕ್ಟೋಬರ್ 07ರಂದು ಮೇಳ ನಡೆಯಲಿದೆ. ಈ ಮೂಲಕ ಎಲ್ಲರೂ ಒಂದಾಗಿ, ಹೊಸ ಸ್ನೇಹಿತರನ್ನು ಮಾಡಿಕೊಂಡು, ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಲಾಗಿದೆ. ಈ ಆನ್‌ಲೈನ್ ಇವೆಂಟ್‌ಗೆ ಅಕ್ಟೋಬರ್ 4ಕ್ಕೆ ಮುನ್ನ ವಿಡಿಯೋ ಕಳುಹಿಸಬಹುದು. chiranthanamela@gmail.com, www.chiranthana.in ನಲ್ಲಿ ರಿಜಿಸ್ಟ್ರೇಷನ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 8105564884 ಸಂಖ್ಯೆಗೆ ಕರೆ ಮಾಡಬಹುದು.