ಹಿಂದಿ ಚಿತ್ರರಂಗದ ಚಿರಯೌವ್ವನೆ ರೇಖಾ ಅವರ ದೊಡ್ಡ ಫ್ಯಾನ್ ಅಂತೆ ಮೆಗಾಸ್ಟಾರ್ ಚಿರಂಜೀವಿ! ರೇಖಾ ಮೇಲಿನ ಅಭಿಮಾನಕ್ಕಾಗಿ ಚಿರು ಮಾಡಿದ್ದೇನು ಗೊತ್ತಾ? ಇಂಟರೆಸ್ಟಿಂಗ್ ಆಗಿ ನೋಡಿ. 

ಇತ್ತೀಚಿಗೆ ಹೈದರಾಬಾದ್‌ನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭಕ್ಕೆ ನಾಗ ಚೈತನ್ಯ, ನಾಗಾರ್ಜುನ, ಅಮಲಾ, ಶ್ರೀದೇವಿ, ಬೋನಿ ಕಪೂರ್, ರೇಖಾ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ಭಾಗಿಯಾಗಿದ್ದರು.  ಈ ಸಂದರ್ಭದಲ್ಲಿ ಚಿರಂಜೀವಿ ಹೊಸ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. 

 

' ನಾನು ರೇಖಾ ಅವರ ದೊಡ್ಡ ಅಭಿಮಾನಿ. ಅವರೊಬ್ಬ ಅಪ್ರತಿಮ ಸುಂದರಿ. ನನ್ನ ಪತ್ನಿಯ ಹೆಸರು ಸುರೇಖಾ. ರೇಖಾ ಮೇಲಿನ ಅಭಿಮಾನದಿಂದ ನಾನವರನ್ನು 'ರೇಖಾ' ಎಂದು ಕರೆಯುತ್ತೇನೆ. ಈ ವಿಚಾರವನ್ನು ನನ್ನ ಪತ್ನಿಗೂ ಹೇಳಿರಲಿಲ್ಲ' ಎಂದು ಹೇಳಿದರು.