Asianet Suvarna News Asianet Suvarna News

ಇಂದು ಓಂ ಪುರಿ ಜನ್ಮದಿನ:14ನೇ ವಯಸ್ಸಿನಲ್ಲಿ ಓಂ ಮಾಡಿದ್ದೇನು?

ಬಾಲಿವುಡ್ ಮೇರು ನಟ ಓಂ ಪುರಿ ಜನ್ಮದಿನ! ಕಷ್ಟ ಕಾರ್ಪಣ್ಯದಲ್ಲೇ ಬೆಳೆದ ಅಪರೂಪದ ನಟ! ಭಾರತೀಯ ಚಿತ್ರರಂಗದ ಪ್ರಬುದ್ಧ ನಟ ಓಂ ಪುರಿ! ವಿವಾದಗಳಿಂದ ತುಂಬಿದ್ದ ಓಂ ಪುರಿ ಜೀವನ! 14ನೇ ವಯಸ್ಸಿಗೆ ಓಂ ಪುರಿ ಮಾಡಿದ್ದೇನು ಗೊತ್ತಾ? 

Bolywood Remembers Veteran Actor OM Puri on His Birthday
Author
Bengaluru, First Published Oct 18, 2018, 8:38 PM IST
  • Facebook
  • Twitter
  • Whatsapp

ಮುಂಬೈ(ಅ.17): ಇಂದು ಬಾಲಿವುಡ್ ನಟ ದಿವಂಗತ ಓಂ ಪುರಿ ಅವರ 78ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಇಂದು ಬಾಲಿವುಡ್ ತನ್ನ ಅಪರೂಪದ ನಟನನ್ನು ನೆನೆದಿದೆ.

ಭಾರತೀಯ ಚಿತ್ರರಂಗದ ಅತ್ಯಂತ ಪ್ರಬುದ್ಧ ನಟರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಓಂ ಪುರಿ 18-10-1950 ರಂದು ಪಂಜಾಬ್‌ನ ಅಂಬಾಲಾದಲ್ಲಿ ಜನಿಸಿದರು.

ವಿಶೇಷವೆಂದರೆ ಓಂ ಪುರಿ ವರಿಗೆ ತಮ್ಮ ಜನ್ಮ ದಿನಾಂಕದ ಕುರಿತು ಮಾಹಿತಿಯೇ ಇರಲಿಲ್ಲ. ಆದರೆ ಅವರ ತಾಯಿ ಹೇಳಿದಂತೆ ಓಂ ಹುಟ್ಟಿದ ದಿನ ದಸರಾ ಹಬ್ಬವಿತ್ತು. ಅದರಂತೆ ಕ್ಯಾಲೆಂಡರ್‌ನಲ್ಲಿ ಹುಡುಕಿದಾಗ ಓಂ ಜನ್ಮ ದಿನದ ಕುರಿತು ಮಾಹಿತಿ ಲಭ್ಯವಾಗಿದೆ.

ಬಾಲ್ಯಾವಸ್ಥೆಯಲ್ಲೇ ಹಲವು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದ ಓಂ, ಮುಂದೆ ಇಡೀ ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತ ನಟರಾಗಿ ಬೆಳೆದಿದ್ದು ಮಾತ್ರ ನಿಜಕ್ಕೂ ಪ್ರಶಂಸೀಯವೇ ಸರಿ.

ಆದರೆ ಓಂ ಜೀವನದಲ್ಲಿ ಕೆಲವು ವಿವಾದಗಳೂ ಕೇಳಿ ಬಂದಿದ್ದು ಮಾತ್ರ ಈ ದಿಗ್ಗಜ ನಟನ ಪಾಲಿಗೆ ವಿಪರ್ಯಾಸವೇ ಸರಿ. ಪ್ರಮುಖವಾಗಿ ಓಂ 14ನೇ ವಯಸ್ಸಿನಲ್ಲೇ ತಮ್ಮ ಮನೆಗೆಲಸದಾಕೆ ಜೊತೆ ಹಾಸಿಗೆ ಹಂಚಿಕೊಂಡಿದ್ದರು ಎಂಬ ಸುದ್ದಿ ವಿವಾದ ಸೃಷ್ಟಿಸಿತ್ತು.

ಈ ಸತ್ಯವನ್ನು ಖುದ್ದು ಓಂ ಪುರಿ ಅವರ ಎರಡನೇ ಪತ್ನಿ ನಂದಿತಾ ಅವರೇ ಓಂ ಅವರ ಆತ್ಮಕತೆಯಲ್ಲಿ ಉಲ್ಲೇಖಿಸಿದ್ದರು. ಇದಾದ ಬಳಿಕ ಓಂ ಮತ್ತು ನಂದಿತಾ ದೂರವಾಗಿದ್ದೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇಷ್ಟೇ ಅಲ್ಲದೇ ಓಂ ಪುರಿ ವಿರುದ್ಧ ಕೌಟುಂಬಿಕ ಹಿಂಸೆಯ ಆರೋಪವೂ ಕೇಳಿ ಬಂದಿತ್ತು. ಖುದ್ದು ನಂದಿತಾ ಅವರೇ ಪತಿ ಓಂ ಪುರಿ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದರು.

ಕೊನೆಯಲ್ಲಿ 2016ರಲ್ಲಿ ಓಂ ಪುರಿ ತಮ್ಮ ಮನೆಯಲ್ಲಿ ಒಬ್ಬರೇ ಇರುವಾಗ ಕೊನೆಯುಸಿರೆಳೆದಿದ್ದರು. ಅವರು ನಿಧನ ಹೊಂದಿದ ಹಲವು ಗಂಟೆಗಳ ಬಳಿಕವಷ್ಟೇ ಅವರ ಸಾವಿನ ಕುರಿತು ಜಗತ್ತಿಗೆ ಗೊತ್ತಾಗಿದ್ದು ಕೂಡ ಒಂದು ವಿಪರ್ಯಾಸವೇ ಸರಿ.  

Follow Us:
Download App:
  • android
  • ios