ಹಾಟ್ ಪಾತ್ರವಿದ್ದರೂ ತೊಂದರೆಯಿಲ್ಲ

entertainment | Tuesday, January 30th, 2018
Suvarna Web desk
Highlights

ನಾನು ಯಾವುದೇ ರೀತಿಯ ಮಹಿಳಾ ಮೋರ್ಚಾಗೆ ಸೇರಲ್ಲ’ ಎಂದು ತಾಪ್ಸಿ ಪನ್ನು ಹೇಳಿಕೊಂಡಿದ್ದಾಳೆ. ಆ ಮೂಲಕ ಮುಂದೆ ಹಾಟ್, ರೊಮ್ಯಾಂಟಿಕ್ ಚಿತ್ರಗಳಲ್ಲೂ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾಳೆ.

ನನಗೆ ಚೌಕಟ್ಟು ಹಾಕಿಕೊಳ್ಳಲು ಇಷ್ಟವಿಲ್ಲ. ಸಿಗುವಂತಹ ಎಲ್ಲಾ ರೀತಿಯ ಪಾತ್ರಗಳನ್ನೂ ನಾನು ಮಾಡುತ್ತೇನೆ. ಯಾವುದೇ ನಟ, ನಟಿಯರು ಪ್ರಾರಂಭದ ದಿನಗಳಲ್ಲಿ ಮಾಡಿದ ಚಿತ್ರಗಳ ಆಧಾರದ ಮೇಲೆಯೇ ಅವರ ಇಮೇಜ್ ಬಿಲ್ಡ್

ಆಗುವುದು ಎಲ್ಲಾ ಸಿನಿಮಾ ಇಂಡಸ್ಟ್ರಿ ಗಳಲ್ಲೂ ಸಹಜ. ನನ್ನ ‘ಪಿಂಕ್’ ಚಿತ್ರದ ನಂತರ ನನಗೆ ಇಂಥದೊಂದು ಇಮೇಜ್ ಬಿಲ್ಡ್ ಆಗುವ ಸಾಧ್ಯತೆ ಇದೆ. ಆದರೆ ನಾನು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಾನು ಯಾವುದೇ ರೀತಿಯ ಮಹಿಳಾ ಮೋರ್ಚಾಗೆ ಸೇರಲ್ಲ’ ಎಂದು ತಾಪ್ಸಿ ಪನ್ನು ಹೇಳಿಕೊಂಡಿದ್ದಾಳೆ. ಆ ಮೂಲಕ ಮುಂದೆ ಹಾಟ್, ರೊಮ್ಯಾಂಟಿಕ್ ಚಿತ್ರಗಳಲ್ಲೂ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾಳೆ.

ಖಾಸಗಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ತಾಪ್ಸಿ ಈ ವಿಚಾರ ಹೇಳಿಕೊಂಡಿದ್ದು, ‘ಪಿಂಕ್’ ಚಿತ್ರದಿಂದಾಗಿ ನನಗೆ ಮಹಿಳೆಯರ ಪರವಾದ ಪಾತ್ರ ಮಾಡುತ್ತಾಳೆ ಎನ್ನುವ ಇಮೇಜ್ ಜನರಲ್ಲಿ ಬೆಳೆಯುತ್ತಿದೆ ಎನ್ನಿಸುತ್ತಿದೆ. ಇದು ನನಗೆ ಇಷ್ಟವಿಲ್ಲ. ಇದರಿಂದ ಹೊರ ಬಂದು ಎಲ್ಲಾ ರೀತಿಯ ಪಾತ್ರಗಳಲ್ಲೂ ನಾನು ಕಾಣಿಸಿಕೊಳ್ಳುತ್ತೇನೆ. ಹಾಟ್ ಚಿತ್ರಗಳಲ್ಲೂ ಮುಂದೆ ಬಣ್ಣ ಹಚ್ಚುತ್ತೇನೆ ಎಂದಿದ್ದಾರೆ. ಫೆಬ್ರವರಿಯಲ್ಲಿ ‘ದಿಲ್ ಜಂಗ್ಲೀ’ ಚಿತ್ರ ತೆರೆಗೆ ಬರಲಿದೆ.

ರೊಮ್ಯಾಂಟಿಕ್ ಆ್ಯಂಡ್ ಕಾಮಿಡಿ ಇರುವ ಚಿತ್ರದಿಂದಲೇ ನನ್ನ ಇಮೇಜ್ ಚೆಂಜ್ ಆಗಲಿದೆ. ಮುಂದೆ ಎಲ್ಲಾ ರೀತಿಯ ನೋಡುಗರನ್ನೂ ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಒಪ್ಪಿಕೊಳ್ಳುತ್ತೇನೆ. ಆ ಪಾತ್ರಗಳಿಗೆ ಜೀವ ತುಂಬಲು ರಿಸ್ಕ್ ತೆಗೆದುಕೊಳ್ಳಲೂ ನಾನು ಸಿದ್ಧ ಎಂದು ಹೇಳಿಕೊಂಡಿದ್ದಾಳೆ. ಇದರಿಂದ ಮುಂದಿನ ದಿನಗಳಲ್ಲಿ ತಾಪ್ಸಿಯನ್ನು ಹಾಟ್, ರೊಮ್ಯಾಂಟಿಕ್ ಆಗಿಯೂ ಕೂಡ ನೋಡುವ ಭಾಗ್ಯ ಅಭಿಮಾನಿಗಳ ಪಾಲಿಗೆ ದೊರೆಯಲಿದೆ ಎನ್ನುವುದರ ಸುಳಿವು ಸ್ವತಃ ತಾಪ್ಸಿಯ ಬಾಯಿಯಿಂದಲೇ ಹೊರಬಂದಿದೆ.

Comments 0
Add Comment

    ಹೆಚ್ಡಿಕೆಗೆ ಮಲೇಷಿಯಾದಲ್ಲಿ ಆಸ್ತಿ ಇದೆಯೆ? ಇಡಿ, ತೆರಿಗೆ ಅಧಿಕಾರಿಗಳಿಂದ ಬೆದರಿಕೆ

    karnataka-assembly-election-2018 | Friday, May 25th, 2018