ಈ ವರ್ಷ ಫಾರ್ಚುನ್‌ ಇಂಡಿಯಾ ಬಿಡುಗಡೆ ಮಾಡಿರುವ ಭಾರತದ 50 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪೈಕಿ ಅನುಷ್ಕಾ 39ನೇ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಬಾಲಿವುಡ್‌ನ ಏಕೈಕ ಪವರ್‌ ಫುಲ್‌ ಮಹಿಳೆ ಎನ್ನುವ ಖ್ಯಾತಿಗೂ ಇವರೀಗ ಪಾತ್ರರು.

ಅಬ್ಬಾ! ಅನುಷ್ಕಾ-ವಿರಾಟ್ ಮನೆಗೆ ಇಷ್ಟೊಂದು ರೆಂಟಾ?

ಅಷ್ಟಕ್ಕೂ ಅನುಷ್ಕಾ ಫಾರ್ಚುನ್‌ ಇಂಡಿಯಾದ ಗಮನ ಸೆಳೆದು ಆ ಪಟ್ಟಿಗೆ ಸೇರಲು ಕಾರಣವಾಗಿರುವುದು ಅವರ ವಿವಿಧ ಕ್ಷೇತ್ರದ ಸಾಧನೆ.

ಕ್ರೀಡಾಂಗಣದಲ್ಲಿ ಕೊಹ್ಲಿಗೆ ಕಿಸ್, ಅನುಷ್ಕಾ ದಿಲ್ ಖುಷ್!

ಕೇವಲ ನಟಿಯಾಗಿಯಷ್ಟೇ ಉಳಿಯದೇ, ನಿರ್ಮಾಪಕಿಯಾಗಿ ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಚಿತ್ರಗಳನ್ನು ಕೊಟ್ಟು ಬಾಕ್ಸ್‌ ಆಫೀಸ್‌ ಹಿಟ್‌ ದಾಖಲಿಸಿದ್ದರು. ಜೊತೆಗೆ ಜಾಹಿರಾತು ಸಂಸ್ಥೆಗಳ ಹಾಟ್‌ ಫೇವರೇಟ್‌ ಆಗಿ, ನೆಟ್‌ಫ್ಲಿಕ್ಸ್‌, ಅಮೇಜಾನ್‌ ಪ್ರೈಮ್‌ಗಳಿಗೆ ವೆಬ್‌ ಸೀರಿಸ್‌ಗಳ ನಿರ್ಮಾಣಗಾರ್ತಿಯಾಗಿ ವಿವಿಧ ರಂಗಗಳಲ್ಲಿ ಅನುಪಮ ಸಾಧನೆ ಮಾಡಿರುವುದರಿಂದ ಫಾರ್ಚುನ್‌ ಇಂಡಿಯಾ ಮಿಕ್ಕೆಲ್ಲರನ್ನೂ ಬಿಟ್ಟು ಅನುಷ್ಕಾ ಆಯ್ಕೆ ಮಾಡಿಕೊಂಡಿದೆ.