ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ಕಂಡು ಕೃಷ್ಣ ಸುಂದರಿ ಬಿಪಾಶ ಬಸು ತನ್ನ ಪತಿಯೊಂದಿಗೆ ಹೆಣ್ಣು ಮಕ್ಕಳ ರಕ್ಷಣೆಗೆ Self-defence ಕ್ಲಾಸ್ ನಡೆಸುವುದಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ.

 

ಇದು ಆರು ತಿಂಗಳ ಕೋರ್ಸ್ ಆಗಿದ್ದು ಇದರಲ್ಲಿ mixed martial arts ಹಾಗೂ Karate ಹೇಳಿ ಕೊಡಲಾಗುತ್ತದೆ. ಹಾಗೂ ಕೊನೆಯ ಭಾಗದಲ್ಲಿ ಬಿಪಾಶ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರುವ ಬಿಪಾಶ ಈ ಕೋರ್ಸನ್ನು ಮಹಿಳೆಯರಿಗೆಂದೇ ಮೀಸಲಿಟ್ಟಿದ್ದಾರೆ.

 

ಈಗಾಗಲೇ ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿ ತನ್ನ ಮಗಳೊಂದಿಗೆ ಇಂತಹದೇ ಕ್ಲಾಸ್ ನಡೆಸುತ್ತಿದ್ದಾರೆ. ಇನ್ನು ಫಿಟ್‌ನೆಸ್ ಫ್ರಿಕ್ ಆಗಿರುವ ಬಿಪಾಶ ಸಿಕ್ಕಾಪಟ್ಟೆ ಫುಡ್ಡಿ. ಹೊರಗಡೆ ತಿಂದರೆ ಆರೋಗ್ಯ ಹಾಳಾಗುತ್ತದೆ ಎಂದು ಮನೆಯಲ್ಲೇ ತಯಾರಿ ಮಾಡಿಕೊಂಡು ಸೇವಿಸುತ್ತಾರೆ. ಇದಕ್ಕೆ ಬಿಪಾಶ ತಮ್ಮ ಪತಿಗೆ ಥ್ಯಾಂಕ್ಸ್‌ ಹೇಳಲು ಇಷ್ಟಪಡುತ್ತಾರಂತೆ.

ಫಿಟ್ನೆಸ್ ಬುಕ್ ಬರೆಯಲಿದ್ದಾರೆ ಬಿಪಾಶ

ಸೋಷಿಯಲ್ ಮೀಡಿಯಾದಲ್ಲಿ ಜನರು ಹೆಚ್ಚು ಆ್ಯಕ್ಟಿವ್ ಇರುವ ಕಾರಣದಿಂದ ವಿಡಿಯೋಗಳ ಮೂಲಕ ಎಜುಕೇಶನ್ ನೀಡಲು ಚಿಂತಿಸಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಲಿದ್ದಾರೆ.