ಶಶಿಯನ್ನು ಕನ್‌ಫೆಷನ್‌ ರೂಮ್‌ಗೆ ಕರೆಸಿದ ಬಿಗ್‌ ಬಾಸ್‌ ಕಥೆಯೊಂದನ್ನು ಹೇಳಿದ್ದರು. ಆ ಮಕತೆಯನ್ನು ಬದಲಿಸಿ ಹೇಳುವಂತೆಯೂ ತಿಳಿಸಲಾಗಿತ್ತು. ಶಶಿ ರಾಝನ ಹೆಸರನ್ನೇ ಬದಲಿಸಿ ಕತೆ ಹೇಳುತ್ತಾ ಹೋಗುತ್ತಾರೆ.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಸಾಲೆ ಪದಾರ್ಥಗಳನ್ನು ಗುರುತಿಸುವ ಟಾಸ್ಕ್‌ನಲ್ಲಿ ಧನರಾಜ್‌, ಮುರಳಿ, ಜೀವಿತಾ ಸ್ಪರ್ಧಿಸಿದ್ದರು.  ಒಟ್ಟು 11 ಪದಾರ್ಥ ಗುರುತಿಸುವ ಮೂಲಕ ಧನರಾಜ್‌ ಈ ಟಾಸ್ಕ್‌ನಲ್ಲಿ ವಿಜೇತರಾದರು. 

ಆದರೆ  ಇದೆಲ್ಲದಕ್ಕಿಂತ ಗಮನ ಸೆಳೆದು ಸಖತ್ ,ಮನರಂಜನೆ ನೀಡಿದ್ದು ನವೀನ್ ಸಜ್ಜು ಅವರ ಕ್ಲಬ್ ಡ್ಯಾನ್ಸರ್ ಅವತಾರ ಧಮ್ ಮಾರೋ ಧಮ್ ಹಾಡಿಗೆ ನವೀನ್ ಕುಣಿದಿದ್ದು ಭರಪೂರ ಮನರಂಜೆ ನೀಡಿತು. ನಾಳೆಯಿಂದ ಮನೆಯಲ್ಲಿ ಹೊಸ ವರ್ಷ, ಹೊಸ ಆಟ ಆರಂಭವಾಗಲಿದೆ.