ಮೂಲತಃ ಮಾಡೆಲ್ ಹಾಗೂ ಕಂಠದಾನ ನಟರಾದ ಸಿ.ಎಂ. ಧನರಾಜ್ ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಿಗ್‌ಬಾಸ್ ಸೀಸನ್ ೬ರಲ್ಲಿ ಮುಖ ತೋರಿಸಿ ಹೋದ ನಂತರ ತೆರೆ ಮರೆಯಲ್ಲಿದ್ದ ಅವರನ್ನು ಚಿತ್ರ ತಂಡ ಮತ್ತೆ ನಟನೆಗೆ ಕರೆ ತಂದಿದೆ. ಚಿತ್ರೀಕರಣದ ಹಂತದಲ್ಲಿರುವ ಚಿತ್ರತಂಡ ಈಗ ಧನರಾಜ್ ಎಂಟ್ರಿ ಮೂಲಕ ಸುದ್ದಿ ಮಾಡಿದೆ.

‘ಧನರಾಜ್ ಕರಾವಳಿ ಭಾಗದವರು. ಹಲವು ವರ್ಷಗಳಿಂದ ಅವರ ಬಗ್ಗೆ ನನಗೆ ಗೊತ್ತಿತ್ತು. ಮಾಡೆಲಿಂಗ್ ಜತೆಗೆ ಕಂಠದಾನ ಕಲಾವಿದರಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದ ಅವರು, ಹೆಚ್ಚು ಬೆಳಕಿಗೆ ಬಂದಿದ್ದು ಬಿಗ್‌ಬಾಸ್ ಸೀಸನ್ 6ರ ಮೂಲಕ. ನನಗೂ ಅವರಲ್ಲಿನ ನಟನೆಯ ಟ್ಯಾಲೆಂಟ್ ಗೊತ್ತಾಗಿದ್ದು ಬಿಗ್‌ಬಾಸ್ ಎಪಿಸೋಡ್ ನೋಡಿದ ನಂತರ. ಅವಕಾಶ ಸಿಕ್ಕರೆ ಅವರಿಂದ ಒಂದು ಪಾತ್ರ ಮಾಡಿಸಬೇಕೆನ್ನುವ ಆಸೆಯಿತ್ತು. ಅದೀಗ ಈಡೇರುತ್ತಿದೆ. ನಮ್ಮ ಚಿತ್ರದಲ್ಲಿ ಅವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ’ ಎಂದು ಮಾಹಿತಿ ನೀಡುವ ನಿರ್ದೇಶಕ ಕಿಶೋರ್ ಮೂಡಬಿದ್ರೆ, ಆ ಪಾತ್ರ ಎಂಥದ್ದು ಎನ್ನುವುದನ್ನು ಗೌಪ್ಯವಾಗಿಟ್ಟಿದ್ದಾರೆ. 

ಬಿಗ್‌ಬಾಸ್‌ನಿಂದ ಬಂದ ಧನರಾಜ್‌ಗೆ ಶಿವಣ್ಣರಿಂದ ದೊಡ್ಡ ಗಿಫ್ಟ್.. ಅವರೇ ಹೇಳ್ತಾರೆ ಕೇಳಿ