ತುಮಕೂರು ಮೂಲದ ಮನೋಹರ್ ಬ್ಯಾಂಕ್‌ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಫ್ಟ್‌ವೇರ್‌ ಇಂಜಿನಿಯರ್ ಆಗಬೇಕೆಂದು ಕನಸು ಹೊತ್ತವರು. ಆದರೆ ಕುಟುಂಬದ ಜವಾಬ್ದಾರಿ ತನ್ನ ಮೇಲಿದ್ದ ಕಾರಣ ಯಾವುದು ಸರಿ ಹೋಗಲಿಲ್ಲ. ಇನ್ನು ಮನೋಹರ್ಗೆ ಕ್ರಿಕೆಟ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಒಮ್ಮೆ ಆದರೂ ಭಾರತ ತಂಡದಲ್ಲಿ ಪಂದ್ಯವಾಡಬೇಕೆಂದು ಆಸೆ ಇದೆಯಂತೆ.

'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

 

ಫಾಸ್ಟೆಸ್ಟ್‌ ಫಿಂಗರ್‌ ಪ್ರಶ್ನೆಯಲ್ಲಿ ಥಟ್‌ ಅಂತ ಉತ್ತರ ನೀಡಿ ನಾಲ್ಕೇ ವಾರದ ಹಾಟ್‌ ಸೀಟ್ ಸ್ಪರ್ಧಿಯಾದವರು ಮನೋಹರ್. ಇನ್ನು ಫಾಸ್ಟೆಸ್ಟ್‌ ಫಿಂಗರ್‌ನಲ್ಲಿ ಕೇಳಿದ ಮೊದಲ ಪ್ರಶ್ನೆ :

Q: ಕರ್ನಾಟಕ ಪ್ರೀಮಿಯರ್ ಲೀಗ್ ಈ ತಂಡಗಳನ್ನು ಅವುಗಳ ಪ್ರತಿನಿಧಿಸುವ ಊರುಗಳ ಆಧಾರದ ಮೇಲೆ ಉತ್ತರದಿಂದ ದಕ್ಷಿಣಕ್ಕೆ ಜೋಡಿಸಿ?

- A ಬಿಜಾಪುರ್ ಬುಲ್ಸ್

- B ಶಿವಮೊಗ್ಗ ಲಯನ್ಸ್

- C ಬೆಂಗಳೂರು ಬ್ಲಾಸ್ಟರ್ಸ್

- D ಬಳ್ಳಾರಿ ಟಸ್ಕರ್ಸ್‌, ಎಂದು ಆಯ್ಕೆಗಳಿದ್ದು ಇದಕ್ಕೆ A,D,B ಹಾಗೂ C ಎಂದು ಸರಿಯಾದ ಉತ್ತರ ನೀಡಿ ಹಾಟ್‌ಸೀಟ್ ನಲ್ಲಿ ಕೂರುವುದನ್ನು ತನ್ನದಾಗಿಸಿಕೊಂಡರು.

ಕೋಟಿ ಗೆಲ್ಲೋ ಆಟದಲ್ಲಿ ಕಣ್ಣೀರಿಟ್ಟ ಯುವತಿ!

 

ಆಟವಾಡುವ ಮೊದಲು ಹತ್ತು ಪ್ರಶ್ನೆಗಳಿಗೆ ಯಾವುದೇ ಲೈಫ್‌ ಲೈನ್‌ ಬಳಸದೇ ಉತ್ತರ ನೀಡಿ 3.20 ಲಕ್ಷ ತನ್ನದಾಗಿಸಿಕೊಂಡರು. ಆ ನಂತರ 6.40 ಲಕ್ಷದ ಪ್ರಶ್ನೆಗೆ ಲೈಫ್‌ ಲೈನ್ ಬಳಸಿ ಸರಿಯಾದ ಉತ್ತರ ನೀಡಿದರು. ಬಟ್‌ ಮನೋಹರ್ಗೆ ತೊಂದರೆ ಕೊಟ್ಟ ಪ್ರಶ್ನೆಯೇ 12.50 ಲಕ್ಷದ್ದು.

Q: ಬ್ರಿಟನ್ನಿನ ಯಾವ ಮಾಜಿ ಪ್ರಧಾನಿ ಬ್ಯಾಂಗ್‌ಲೋರ್‌ ಕ್ಲಬ್‌ನಲ್ಲಿ 1899 ರಲ್ಲಿ 13 ರೂಪಾಯಿಗಳ ಬಾಕಿ ಉಳಿಸಿದ್ದರು? ಎಂಬ ಪ್ರಶ್ನೆ ಕೇಳಲಾಗಿತ್ತು.

 

- A ಮಾರ್ಗರೇಟ್ ಥ್ಯಾಚರ್

- B ರಾಮ್ಸ್ ಮೆಕ್‌ಡೊನಾಲ್ಡ್

- C ನವಿಲ್ ಚೇಂಬಲ್ ಲೀನ್‌

- D ವಿನ್ಸಟಿಲ್ ಚರ್ಚಿಲ್, ಎಂದು ಪ್ರಶ್ನೆ ಕೇಳಲಾಗಿದ್ದು ಉತ್ತರ ಗೊತ್ತಿಲ್ಲ ಕಾರಣ ಆಡಿಯನ್ಸ್‌ ಪೋಲ್ ಹಾಗೂ ಡಬಲ್ ಡಿಪ್‌ ಎರಡು ಲೈಫ್‌ಲೈನ್‌ ಬಳಸಿದರು. ಆದರೆ ಸಿಕ್ಕ ಉತ್ತರದ ಮೇಲೆ ನಂಬಿಕೆ ಇಲ್ಲದ ಕಾರಣ ಆಟವನ್ನು ಕ್ವಿಟ್‌ ಮಾಡಿ 6.40 ಲಕ್ಷವನ್ನು ತನ್ನದನಾಗಿಸಿಕೊಂಡರು.

ಕೋಟ್ಯಧಿಪತಿಯಲ್ಲಿ ಲೈಫ್ ಲೈನ್ ಇದ್ರೂ ಎಡವಟ್ಟು ಮಾಡಿಕೊಂಡ ಡಾಕ್ಟರ್!