ಅವನೇ ಶ್ರೀಮನ್ನಾರಾಯಣ ಚಿತ್ರದ ಬಿಡುಗಡೆಯಾಗಿರುವ ಹಾಡು ಎಲ್ಲ ಕಡೆ ಸದ್ದು ಮಾಡುತ್ತಿದೆ. ಇದು ಚರಿತ್ರೆ ಸೃಷ್ಟಿಸೋ ಅವತಾರ ಎನ್ನುತ್ತ ಸೋಶಿಯಲ್ ಮೀಡಿಯಾದದಲ್ಲಿ ಮುಂದೆ ನುಗ್ಗುತ್ತಿದೆ.

ಇದೆಲ್ಲದರ ನಡುವೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡಿದ್ದ ಬೆಡಗಿ ಸಂಯುಕ್ತಾ ಹೆಗ್ಡೆ ಟಿಕ್ ಟಾಕ್ ಮೂಲಕ ಹಾಡಿಗೆ ಹೆಜ್ಜೆ  ಹಾಕಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಇದು ಹಾಟ್ ಫೆವರೇಟ್.

ಶಾನ್ವಿ ಶ್ರೀ ವಾತ್ಸವ್ ಡ್ಯಾನ್ಸ ಗೆ ಉಘೆ ಉಘೆ

ಕಿರಕ್ ಪಾರ್ಟಿಯಿಂದ ಹೆಸರು ಪಡೆದುಕೊಂಡಿದ್ದ ಸಂಯುಕ್ತಾ ನಂತರ ಕನ್ನಡದಿಂದ ಕೊಂಚ ದೂರವಾಗಿದ್ದರು. ಹಿಂದಿಯ ಕೆಲ ರಿಯಾಲಿಟಿ ಶೋಗಳಲ್ಲಿಯೂ ಮಿಂಚು ಹರಿಸಿದ್ದರು. ಬಾಯ್ ಫ್ರೆಂಡ್ ಜತೆ  ವಿದೇಶದ  ಬೀಚ್ ಗಳಲ್ಲಿ ತಿರುಗುತ್ತ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಟಿಕ್ ಟಾಕ್ ನಲ್ಲಿ ಹೆಜ್ಜೆ ಹಾಕಿ  ಅಭಿಮಾನಿಗಳಿಗೆ ಶಾಕ್ ನೀಡುವುದರೊಂದಿಗೆ ರಕ್ಷಿತ್ ಶೆಟ್ಟಿ ಮತ್ತು ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.