ವಿಲನ್ ನಟಿ ಆ್ಯಮಿ ಜಾಕ್ಸನ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಆ್ಯಮಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ 'ಆ್ಯಂಡ್ರಿಯಾಸ್’ ಎಂದು ಹೆಸರಿಟ್ಟಿದ್ದಾರೆ. 

ಪಾಪುವಿನ ಫೋಟೋ ಶೇರ್ ಮಾಡಿ, ನಮ್ಮ ಏಂಜಲ್, ಆ್ಯಂಡ್ರಿಯಾ ಜಗತ್ತಿಗೆ ನಿಮಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Our Angel, welcome to the world Andreas 💙

A post shared by Amy Jackson (@iamamyjackson) on Sep 23, 2019 at 3:36am PDT

ಮಗು ಹುಟ್ಟುವ ಮೊದಲು ಮಗುವಿನ ಲಿಂಗವನ್ನು ರಿವೀಲ್ ಮಾಡಿದ್ದರು. ಆಗಲೇ ಗಂಡು ಮಗು ಎಂದು ಗೊತ್ತಾಗಿತ್ತು. 

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಆ್ಯಮಿ; ಬೇಬಿ ಶವರ್ ಫೋಟೋಗಳಿವು

ಆ್ಯಮಿ ಜಾರ್ಜ್ ಜೊತೆ ಡೇಟಿಂಗ್ ನಡೆಸುತ್ತಿರುವ ವಿಚಾರವನ್ನು ಆ್ಯಮಿ ಜಾಕ್ಸನ್ 2019 ರ ಶುರುವಿನಲ್ಲಿ ಬಹಿರಂಗಪಡಿಸಿದ್ದರು. ಜಾರ್ಜ್- ಆ್ಯಮಿ ಆಗಾಗ ವಿದೇಶಿ ಪ್ರವಾಸ, ಹಾಲಿಡೇ ಟ್ರಿಪ್ ಅಂತೆಲ್ಲಾ ಸುತ್ತಾಡುತ್ತಿದ್ದರು. ಜೊತೆಗೆ ಆ್ಯಮಿ ಬೇರೆ ಬೇರೆ ಬ್ರಾಂಡ್ ಗಳ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದರು.  ಮೂಲಗಳ ಪ್ರಕಾರ 2020 ರಲ್ಲಿ ಆ್ಯಮಿ- ಜಾರ್ಜ್ ಗ್ರೀಕ್ ಸಂಪ್ರದಾಯದ ಪ್ರಕಾರ ಮದುವೆಯಾಗಲಿದ್ದಾರೆ ಎನ್ನಲಾಗಿದೆ.