‘ಅಮರ್’ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಅದ್ದೂರಿಯಾಗಿ ಲಾಂಚ್ ಆಗಿದ್ದಾರೆ. ನಟಿ ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದಾರೆ. 

ತಾನ್ಯಾ ಹೋಪ್ ಪಾತ್ರ ಹೇಗೆ ಸೃಷ್ಟಿಯಾಗಿದೆ ಎಂಬುದನ್ನು ನಿರ್ದೇಶಕ ನಾಗಶೇಖರ್ ಬಹಿರಂಗಪಡಿಸಿದ್ದಾರೆ. ಕನ್ನಡದ ಹೆಸರಾಂತ ನಟಿಯೊಬ್ಬಳ ಜೀವನದಿಂದ ಸ್ಫೂರ್ತಿ ಪಡೆದು ಈ ಪಾತ್ರ ಮಾಡಲಾಗಿದೆ ಎಂದಿದ್ದಾರೆ. 

ದಕ್ಷಿಣ ಭಾರತದ ಖ್ಯಾತ ನಟಿ ಮಹಾಲಕ್ಷ್ಮೀ ಅವರ ಜೀವನದಿಂದ ಸ್ಫೂರ್ತಿ ಪಡೆದು ತಾನ್ಯಾ ಹೋಪ್ ಪಾತ್ರವನ್ನು ಮಾಡಲಾಗಿದೆ. ಮಹಾಲಕ್ಷ್ಮೀ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಜಯಸಿಂಹ’, ಹೆಂಡ್ತಿಗೆ ಹೇಳ್ಬೇಡಿ, ಪೂಜಾ ಫಲ, ತಾಯಿ ಕೊಟ್ಟ ತಾಳಿ ಚಿತ್ರಗಳಲ್ಲಿ ನಟಿಸಿದ್ದಾರೆ. 

ಅಮರ್ ಚಿತ್ರದಲ್ಲಿ ತಾನ್ಯಾ ಹೆಸರು ಬಾಬಿ. ಮೊದಲಾರ್ಧರಲ್ಲಿ ಸ್ಟೈಲಿಶ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ಕ್ರೈಸ್ತ ಸನ್ಯಾಸಿನಿಯಾಗಿ ಕಾಣಿಸಿಕೊಳ್ಳುತ್ತಾರೆ. ಎರಡೂ ಪಾತ್ರದಲ್ಲಿ ತಾನ್ಯಾ ಅದ್ಭುತವಾಗಿ ನಟಿಸಿದ್ದಾರೆ.