ಹೆಂಡತಿಗೆ ಅವಹೇಳನ ಮಾಡಿದರು ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಸಮೀರ್ ಆಚಾರ್ಯ ತಮ್ಮಿಬ್ಬರ ನಡುವಿನ ಪ್ರೀತಿಯ ಆಳವನ್ನು ವಿವರಿಸುವ ಯತ್ನ ಮಾಡಿದ್ದಾರೆ.  ಅಲ್ಲದೇ ತಮ್ಮನ್ನು ಟ್ರೋಲ್ ಮಾಡಿದವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋಟ್ಯಧಿಪತಿ ಮತ್ತು ಬಿಗ್ ಬಾಸ್ ನ ಎರಡು ಘಟನಗೆಳ ವಿಡಿಯೋವನ್ನು ಆಚಾರ್ಯ ತಮ್ಮ ಭಾಷಣದ ನಡುವೆ ಹರಿಯ ಬಿಟ್ಟಿದ್ದಾರೆ.  ಇಷ್ಟು ದಿನ ಮಾಡಿದ ಒಳ್ಳೆಯ ಕೆಲಸ ಎಲ್ಲಿ ಹೋಯಿತು? ಪಾಠ ಪ್ರವಚನ -ದೇಶದ ಬಗ್ಗೆ ಮಾತನಾಡಿದ ವಿಚಾರಗಳು ಇಷ್ಟು ಶೇರ್ ಆಗಲಿಲ್ಲ.

ನಾನೇ ಎಂದು ಬೀಗಬೇಡ; ರಾಮಾಯಣ ಓದಿಕೊಂಡ ಆಚಾರ್ಯರು ತಪ್ಪು ಹೇಳಿದ್ದನ್ನ ಕಂಡಿದ್ದೇವೆ!

ರೈತರು ಮತ್ತು ಸೈನಿಕರ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದರೆ ಅದನ್ನು ಯಾರೂ ಹಂಚಿಕೊಳ್ಳಲಿಲ್ಲ. ಅದಕ್ಕೆಲ್ಲ ಮಿಗಿಲಾಗಿ ಕೋಟ್ಯಧಿಪತಿಯ ಒಂದೇ ಒಂದು ವಿಚಾರಕ್ಕೆ ಇಷ್ಟೊಂದು ಟ್ರೋಲ್ ಆಗಿದ್ದೇನೆ... ಎಂದು ಮುಂತಾಗಿ ಮಾತನಾಡಿಕೊಂಡು ಬಂದಿದ್ದಾರೆ.  ಆಚಾರ್ಯರ ಸಾತ್ವಿಕ ಆಕ್ರೋಶದ ವಿಡಿಯೋ ನೋಡಿಕೊಂಡು ಬನ್ನಿ...