ಹಾರರ್ ಚಿತ್ರ ಮಾಡಲು ಹೋಗಿ ಬೆಚ್ಚಿ ಬಿದ್ದ ನಟಿ

Actress Vaishali scared in horror cinema set
Highlights

ಭರ್ಜರಿ’ ಚಿತ್ರದ ನಂತರ ಆಲ್‌ಮೋಸ್ಟ್ ನಾಪತ್ತೆಯಾಗಿದ್ದ ವೈಶಾಲಿ ಇದೀಗ ವಾಪಸ್ಸಾಗಿದ್ದಾರೆ. ಹಾರರ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹಾರರ್ ಚಿತ್ರದಲ್ಲಿ ಇವರು ಯಾವ ಪಾತ್ರ ಮಾಡ್ತಾ ಇದ್ದಾರೆ? ಸೆಟ್’ನಲ್ಲಿ ದೆವ್ವ ಕಾಣಿಸಿಕೊಂಡಿದ್ದು ಹೌದಾ? 

‘ಭರ್ಜರಿ’ ಚಿತ್ರದ ನಂತರ ಆಲ್‌ಮೋಸ್ಟ್ ನಾಪತ್ತೆಯಾಗಿದ್ದ ವೈಶಾಲಿ ಇದೀಗ ‘ಟ್ರಂಕ್’ನಲ್ಲಿ ಪತ್ತೆಯಾಗಿದ್ದಾರೆ. ಈ ಹಾರರ್ ಸಿನಿಮಾದಲ್ಲಿ ಆ ಗ್ಲಾಮರ್ ಗೊಂಬೆಗೇನು ಕೆಲಸ ಅಂತ ಕೇಳಿದಾಗ...

1.  ನಾನಿಲ್ಲಿ ಹೈಪರ್ ಆ್ಯಕ್ಟಿವ್ ಹುಡುಗಿ 

ಚಿತ್ರದಲ್ಲಿ ನನ್ನ ಪಾತ್ರ ಹೇಗೆ ಬರುತ್ತೆ, ಅದರ ವಿಶೇಷತೆ ಏನು ಅನ್ನೋದನ್ನು ನಾನು ಹೇಳೋದಿಲ್ಲ. ಹಾಗೆ ಹೇಳಿದ್ರೆ ಕತೆ ರಿವೀಲ್ ಆಗುತ್ತೆ. ಆದ್ರೆ ನನ್ನ ಪಾತ್ರದ ಸೃಷ್ಟಿಸಿದ ರೀತಿ ಅದ್ಭುತವಾಗಿದೆ. ಮಧ್ಯಮ ವರ್ಗದ ಹುಡುಗಿ. ಅಪ್ಪ ಇಲ್ಲ, ಅಮ್ಮನ ಆಶ್ರಯದಲ್ಲಿ ಬೆಳೆದವಳು. ಆದ್ರೆ ಹೈಪರ್ ಆ್ಯಕ್ಟಿವ್. ಆಕೆಯ ಜೀವನದಲ್ಲಿ ಕಥಾ ನಾಯಕ ಹೇಗೆ ಎಂಟ್ರಿಯಾದ, ಆ ನಂತರ ಆಕೆಯ ಬದುಕಲ್ಲಿ ಏನಾಯಿತು ಅನ್ನೋದು ನನ್ನ ಪಾತ್ರ.

2. ಬೆಚ್ಚಿಬಿದ್ದ ಕ್ಷಣ

ಕನಕಪುರ ಸಮೀಪದ ಒಂದು ಒಂಟಿ ಮನೆಯಲ್ಲಿ ಚಿತ್ರೀಕರಣ. ಆ ಮನೆ ನೋಡುವುದಕ್ಕೆ ಭಯ ಆಗುವಂತಿದೆ. ಅಲ್ಲಿ ತಿಂಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಪ್ರತಿ ದಿನ ನಾನು ಅಲ್ಲಿಗೆ ಚಿತ್ರೀಕರಣಕ್ಕೆ ಅಂತ ಹೋಗಿ ಬರುತ್ತಿದೆ. ಒಂದು ಬೆಳಗ್ಗೆ ಸೆಟ್‌ಗೆ ಬೇಗ ಹೋದೆ. ಅಲ್ಲರೂ ಅಲ್ಲಿಯೇ ಇದ್ದರು. ನನಗೆ ಯೋಗ ಮಾಡುವ ಅಭ್ಯಾಸ. ಸುಮ್ನೆ ಒಬ್ಬಳೆ ಯೋಗ ಮಾಡುತ್ತಿದ್ದಾಗ ಒಂದು ಕ್ಷಣ ಯಾರೋ ಎದುರಿಗೆ ಬಂದು ಹೋದಂತಾಯಿತು. ತಕ್ಷಣವೇ ಎದ್ದು ನಿಂತು ಹಿಂಬಾಲಿಸಿ ಹೋದರೆ ಅಲ್ಲಿ ಯಾರು ಇರಲಿಲ್ಲ. ಒಂದು ಕ್ಷಣ ದೇಹ ಕಂಪಿಸಿತು. ಹಾರರ್ ಕತೆ ಅಂತ ಸಿನಿಮಾ ಮಾಡುವುದಕ್ಕೆ ಹೋಗಿ, ನಾನೇ ಹಾರರ್ ಅನುಭವಕ್ಕೆ ಒಳಗಾದೆ.

3. ನಾನೆಲ್ಲೂ ಹೋಗಿಲ್ಲ..

ನಾನು ಪೂರ್ಣ ಪ್ರಮಾಣದಲ್ಲಿ ಸಿನಿಮಾದಿಂದ ದೂರವಾಗಿಲ್ಲ. ಹೆಲ್ತ್ ಕೋರ್ಸ್‌ಗೆ ಅಂತ ಒಂದಷ್ಟು ಬ್ರೇಕ್ ಬೇಕಿತ್ತು. ಇನ್ನೇನು ಆ ಕೋರ್ಸ್ ಮುಗಿಯುತ್ತಾ ಬಂದಿದೆ. ಈ ಮುಂಚೆ ಮಾತುಕತೆ ನಡೆಸಿದ್ದ ಒಂದಷ್ಟು ಪ್ರಾಜೆಕ್ಟ್ ಬಾಕಿ ಉಳಿದಿವೆ. ಅವುಗಳಿಗೆ ಚಾಲನೆ ಸಿಗುತ್ತಿದೆ. ಈ ನಡುವೆ ಇದೇ ವಾರ ‘ಟ್ರಂಕ್’ ತೆರೆಗೆ ಬರುತ್ತಿದೆ. ಮಹಿಳಾ ನಿರ್ದೇಶಕಿ ರಿಷಿಕಾ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಎನ್ನುವುದರ ಜತೆಗೆ ಇದೊಂದು ನೈಜ ಘಟನೆಯ ಚಿತ್ರ. ಇದೇ ಮೊದಲು ಹಾರರ್ ಚಿತ್ರವೊಂದರಲ್ಲಿ ಅಭಿನಯಿಸಿದ್ದೇನೆ. 

loader