ಕರ್ನಾಟಕದ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೆಡ್ ಮೂಡ್ ನಲ್ಲಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ‘ಡಿಯರ್ ಕಾಮ್ರೆಡ್’ ಬಾರೀ ನಿರೀಕ್ಷೆ ಹುಟ್ಟಿಸಿದೆ. 

ಡಿಯರ್ ಕಾಮ್ರೆಡ್ ಪ್ರಮೋಶನ್ ವೇಳೆ, ಭಾವೀ ಪತಿ ಹೇಗಿರಬೇಕೆಂದು ಮಾತನಾಡಿದ್ದಾರೆ. ಬಾಳ ಸಂಗಾತಿಯಾಗುವವರಿಂದ ನಿರೀಕ್ಷೆಗಳೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ. 

ಕನ್ನಡ ಕಷ್ಟವೆಂದು ತಮಿಳಲ್ಲೇ ಹೇಳಿದ ಕೊಡಗಿನ ಬೆಡಗಿ ರಶ್ಮಿಕಾ!

‘ನನ್ನ ಸಂಗಾತಿಯಾಗುವವನು ಅಂತರ್ಮುಖಿಯೋ, ಬಹಿರ್ಮುಖಿಯೋ ಅನ್ನೋದು ಮುಖ್ಯವಲ್ಲ. ಆದರೆ ಅವನು ನೈಸ್ ಪರ್ಸನ್ ಆಗಿರಬೇಕು. ನನಗೆ ಅವನ ವೈಬ್ ನನಗೆ ಇಷ್ಟವಾಗುವಂತಿರಬೇಕು. ಅವನು ರೊಮ್ಯಾಂಟಿಕ್ ಆಗಿದ್ರೆ ಸಾಕು ವಯಸ್ಸಿನ ಅಂತರವಿದ್ರೂ ಪರ್ವಾಗಿಲ್ಲ’ ಎಂದಿದ್ದಾರೆ. 

ಸಾಯಿ ಪಲ್ಲವಿ ನಿರಾಕರಿಸಿದ ಹುಡುಗನಿಗೆ ಓಕೆ ಅಂದ ರಶ್ಮಿಕಾ ಮಂದಣ್ಣ !

ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಜೊತೆ 2017 ರಲ್ಲಿ ನಿಶ್ಚಿತಾರ್ಥವಾಗಿತ್ತು. ಆದರೆ ಅದು ಹೆಚ್ಚು ಸಮಯ ಬಾಳಲಿಲ್ಲ. ರಶ್ಮಿಕಾ ಟಾಲಿವುಡ್ ನಲ್ಲಿ ಒಂದೇ ಸಮನೆ ಬ್ಯುಸಿಯಾದರು. ರಶ್ಮಿಕಾ ಕರಿಯರ್ ಚಾಯ್ಸ್, ವಿಜಯ್ ದೇವರಕೊಂಡ ಜೊತೆ ಕ್ಲೋಸ್ ಆಗಿರುವುದು ರಕ್ಷಿತ್ ಗೆ ಅಸಮಾಧಾನವಿತ್ತು. ಹಾಗಾಗಿ ರಶ್ಮಿಕಾ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿತ್ತು ಎನ್ನಲಾಗಿದೆ. ನಂತರ ಇಬ್ಬರೂ ತಮ್ಮ ತಮ್ಮ ವೃತ್ತಿಯ ಬಗ್ಗೆ ಗಮನ ಹರಿಸುತ್ತಿದ್ದಾರೆ.