ಮುಂಬೈ(ಫೆ. 07)  ಗ್ರ್ಯಾಮಿ ಅವಾರ್ಡ್ ​​ ಕಾರ್ಯಕ್ರಮಕ್ಕೆ ವಿಶಿಷ್ಟ-ವಿಚಿತ್ರ ಉಡುಗೆ ತೊಟ್ಟು ಗಂಡನೊಂದಿಗೆ ಆಗಮಿಸಿದ್ದ ನಟಿ ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಸರಿಯಾದ ಏಟುಗಳನ್ನು ತಿಂದಿದ್ದರು. ನಂತರ ಇದೊಂದು ವಿವಾದವಾಗಿಯೇ ಬದಲಾಗಿತ್ತು.

ಈಗ ಇದೇ ವಿಚಾರದ ಬಗ್ಗೆ ಮಾತನಾಡಿರುವ ಬೋಲ್ಡ್ ನಟಿ ದಿಶಾ ಪಟಾನಿ, ನಾನು ಸಹ ಇಂಥದ್ದೆ ಪರಿಸ್ಥಿತಿ ಎದುರಿಸಿದ್ದೇನೆ.  ಬರುವ ಕೆಟ್ಟ ಕಮೆಂಟ್​ಗಳನ್ನು ಪದೇಪದೆ ನಿಷ್ಕ್ರಿಯಗೊಳಿಸುವ ಬಗ್ಗೆಯೂ ಕ್ರಮ ತೆಗೆದುಕೊಂಡಿದ್ದೇನೆ ಎಂದರು.

ಮೈ ಜಾರಿತು ಪ್ರಿಯಾಂಕಾ ಡ್ರೆಸ್; ತಾಐಇ ಕೊಟ್ಟ ಹೇಳಿಕೆಗೆ ಫ್ಯಾನ್ಸ್ ಶಾಕ್

ಪ್ರಿಯಾಂಕಾ ಬ್ಯೂಟಿಫುಲ್ ಆಗಿ ಕಾಣುತ್ತಾರೆ.  ಹಾಕುವರ ಬಟ್ಟೆಗಿಂಥ ನೋಡುವವರ ನೋಟ ಸರಿಯಾಗಿಲ್ಲ.  ನಮ್ಮ ದೇಶದವರು ಧರಿಸಿದರೆ ಟ್ರೋಲ್ ಮಾಡುತ್ತಾರೆ. ಅದೇ ಬೇರೆ ದೇಶದವರು ಧರಿಸಿದರೇ ಮೆಚ್ಚಿ ಕೊಂಡಾಡುತ್ತಾರೆ ಎಂದು ತಿವಿದರು.

ಈ ಮುಂಚೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಕೂಡ ಮಗಳ ಪರ ಬ್ಯಾಟ್​ ಬೀಸಿದ್ದರು. ಟೀಕೆಗಳು ಪ್ರಿಯಾಂಕಾಳನ್ನು ಮತ್ತಷ್ಟು ಬಲವಾಗಿಸುತ್ತದೆ. 'ಇಂತಹ ಘಟನೆಗಳಿಂದ ನನ್ನ ಮಗಳು ಸ್ಟ್ರಾಂಗ್ ಆಗುತ್ತಾಳೆ. ಪ್ರಿಯಾಂಕಾ ಅವಳದ್ದೇ ರೀತಿಯಲ್ಲಿ ಜೀವನ ನಡೆಸುತ್ತಿದ್ದಾಳೆ. ಆದರೆ ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಅದು ಅವಳ ದೇಹ. ಆಕೆ ಇಷ್ಟ ಪಡುವ ರೀತಿಯಲ್ಲಿ ಬಟ್ಟೆ ಹಾಕುತ್ತಾಲೆ, ಬದುಕುತ್ತಾಳೆ. ಆಕೆಗೆ ಕೆಲವು ದಿನಗಳ ಹಿಂದೆ ಒಂದು ಕೋಟ್ ಕಳುಹಿಸಿದ್ದೆ, ಅದರಲ್ಲಿ 'It's my life. Whose life am I iving, yours or mine? I can do what i want, right?' ಈ ಫಿಲಾಸಫಿಯನ್ನು ಎಲ್ಲರೂ ಪಾಲಿಸಬೇಕು' ಎಂದು ತಮ್ಮ ಮಗಳನ್ನು ಡಿಫೆಂಡ್ ಮಾಡಿ ಕೊಳ್ಳುವ ಜೊತೆಗೆ ಎಲ್ಲರೂ ಈ ತತ್ವವನ್ನು ಪಾಲಿಸಬೇಕೆಂದು ಹೇಳಿದ್ದರು.

ಕತ್ತಿನಿಂದ ಜಾರಿ ಅರ್ಧ ಎದೆಯಲ್ಲದೆ, ಹೊಕ್ಕುಳ ಕಾಣಿಸುವ ರೀತಿ ಧರಿಸಿದ್ದ ಗೌನ್​ ಎಲ್ಲರ ಹುಬ್ಬೇರಿಸಿತ್ತು. ನಂತರ ಇದು ಟ್ರೋಲಿಗರಿಗೆ ದಾಳವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಹರಿದುಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧದ ಮಾತುಗಳು ಕೇಳಿ ಬಂದಿದ್ದವು.