ಬಹುಭಾಷಾ ನಟಿ ಅಮಲಾ ಪೌಲ್ ಬಹುನಿರೀಕ್ಷಿತ  ‘ ಆಡೈ’ ಸಿನಿಮಾದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಈಗ ಅಮಲಾ ಫುಲ್ ಖುಷ್ ಮೂಡ್ ನಲ್ಲಿದ್ದಾರೆ. 

‘ಆಡೈ’ ಚಿತ್ರದ ಬೆತ್ತಲೆ ಗುಟ್ಟು ರಟ್ಟು ಮಾಡಿದ ಅಮಲಾ ಪೌಲ್

ಅಮಲಾ ಮಾಜಿ ಪತಿ ನಿರ್ದೇಶಕ ವಿಜಯ್ ಇನ್ನೊಂದು ಮದುವೆಯಾಗಿದ್ದಾರೆ. ಅವರ ಮದುವೆ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮದವರು ಅಮಲಾಗೆ ಪ್ರಶ್ನಿಸಿದಾಗ, ವಿಜಯ್ ಬಗ್ಗೆ ನನಗೆ ಖುಷಿಯಿದೆ. ಅವರು ಒಳ್ಳೆಯ ವ್ಯಕ್ತಿ. ಅವರಿಗೆ ನನ್ನ ಕಡೆಯಿಂದ ಹ್ಯಾಪಿ ಮ್ಯಾರೀಡ್ ಲೈಫ್’  ಎಂದು ವಿಶ್ ಮಾಡಿದ್ದಾರೆ. 

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ನನ್ನ ಪ್ರೀತಿ ನನಗೆ ಸಿಕ್ಕಿದೆ. ಅವರು ಸಿನಿಮಾ ಇಂಡಸ್ಟ್ರಿಯವರಲ್ಲ. ಅವರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ ಎಂದಿದ್ದಾರೆ. 

ಅಭಿಮಾನಿಗಳಿಗೆ ಶಾಕ್ ಕೊಟ್ಟ ಅಮಲಾ ಬೋಲ್ಡ್ ಟೀಸರ್

ನಿರ್ದೇಶಕ ವಿಜಯ್ ಹಾಗೂ ಅಮಲಾ ಪೌಲ್ 2014 ರಲ್ಲಿ ಪ್ರೀತಿಸಿ ಮದುವೆಯಾದರು. ಮೂರು ವರ್ಷ ಸಂಸಾರ ಮಾಡಿ 2017 ರಲ್ಲಿ ಡಿವೋರ್ಸ್ ಪಡೆದುಕೊಂಡರು. ನಂತರ ಅಮಲಾ ಸಿನಿಮಾಗಳಲ್ಲಿ ಬ್ಯುಸಿಯಾದರು. ಈಗ ಲವ್ವಲ್ಲಿ ಬಿದ್ದಿರುವುದಾಗಿ ಹೇಳಿದ್ದಾರೆ.