ಪೈಲ್ವಾನ್ ಸಿನಿಮಾದ ‘ಕಣ್ಣು ಮಣಿಯೇ...ಕಣ್ಣ ಹೊಡಿಯೇ’ ಹಾಡು ಎಲ್ಲಾ ಹುಡುಗರ ಬಾಯಲ್ಲಿ ಗುನುಗುನಿಸುತ್ತಿದೆ. ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗಿದೆ. 

ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ಅಭಿನಯಿಸಿದ್ದಾರೆ. ಇಲ್ಲಿ ಸುದೀಪ್, ಆಕಾಂಕ್ಷಾಗೆ ಕಣ್ಣು ಮಣಿಯೇ... ಕಣ್ಣ ಹೊಡಿಯೇ ಎಂದು ಹಾಡುತ್ತಾರೆ. ಹಾಗಾಗಿ ಸಹಜವಾಗಿ ಆಕಾಂಕ್ಷಾಗೂ ಈ ಹಾಡು ಇಷ್ಟವಾಗಿದೆ. 

ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಾ, ಕಣ್ಣು ಮಣಿಯೇ.. ಕಣ್ಣ ಹೊಡಿಯೋ’ ಎಂದು ಹಾಡುತ್ತಾ ರೈಡ್ ಮಾಡುತ್ತಿದ್ದಾರೆ. ಇದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆಕಾಂಕ್ಷ ಖುಷಿಯನ್ನು ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ. 

 

ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತವಿದ್ದು ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.