ಮಂಡ್ಯ(ಜು.09): ಜೀವ​ನ​ದಲ್ಲಿ ಜಿಗು​ಪ್ಸೆ​ಗೊಂಡ ಚಿತ್ರ​ನಟರೊಬ್ಬರು ನೇಣು ಬಿಗಿದು ಆತ್ಮ​ಹತ್ಯೆ ಮಾಡಿ​ಕೊಂಡಿ​ರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮಂಡ್ಯದ ವಿ.ವಿ.​ನ​ಗ​ರ ಬಡಾ​ವ​ಣೆ ನಿವಾಸಿ ಸುಶೀಲ್‌ ಕು​ಮಾರ್‌ (30) ಆತ್ಮ​ಹತ್ಯೆ ಮಾಡಿ​ಕೊಂಡ ಚಿತ್ರ​ನಟ. ಇವರು ಬೆಂಗ​ಳೂ​ರಿ​ನಲ್ಲಿ ಜಿಮ್‌ ಟ್ರೈನರ್‌ ಆಗಿ ಕೆಲಸ ಮಾಡು​ತ್ತಿದ್ದರು. ಅಲ್ಲದೆ, ದುನಿಯಾ ವಿಜಿ ಅಭಿ​ನ​ಯದ ಸಲಗ ಚಿತ್ರ​ದಲ್ಲಿ ಪೊಲೀಸ್‌ ಇನ್ಸ್‌​ಪೆ​ಕ್ಟ​ರ್‌, ಕಮ​ರೊಟ್ಟು ಚೆಕ್‌ಪೋಸ್ಟ್‌ನಲ್ಲಿ ಮುಖ್ಯ ಪಾತ್ರ​ದಲ್ಲಿ ಕಾಣಿ​ಸಿ​ಕೊಂಡಿ​ದ್ದರು. ಈ ಚಿತ್ರ​ಗಳೂ ಸೇರಿದಂತೆ ಕೆಲ ಸಿನಿ​ಮಾ​ಗ​ಳಲ್ಲಿ ಸಹ ಕಲಾ​ವಿ​ದ​ನಾಗಿ ನಟಿಸಿ​ದ್ದರು. ಅಲ್ಲದೆ ರಾಧಾ ​ರ​ಮಣ ಧಾರಾ​ವಾ​ಹಿ​ಯಲ್ಲೂ ನಟಿ​ಸಿ​ದ್ದ​ನು.

ಸುಶೀ​ಲ್‌ ​ಕು​ಮಾರ್‌ ತಂದೆ ನಾಗ​ರಾಜು, ತಾಯಿ ಕಲ್ಪನಾ ನಗ​ರದ ವಿ.ವಿ.​ಪು​ರಂನಲ್ಲೇ ವಾಸ​ವಾ​ಗಿ​ದ್ದಾರೆ. ನಾಲ್ಕೈದು ವರ್ಷದ ಹಿಂದೆ ವಿವಾಹವಾಗಿದ್ದ ಇವರುಸ ನಾಲ್ಕೈದು ವರ್ಷ​ಗಳ ಹಿಂದೆ ಬೆಂಗ​ಳೂ​ರಿಗೆ ತೆರ​ಳಿದ್ದ ಸುಶೀ​ಲ್‌ ಕುಮಾರ್‌ ಚಿತ್ರ​ಗ​ಳಲ್ಲಿ ನಟಿ​ಸುತ್ತಾ ಜೀವನ ನಿರ್ವ​ಹ​ಣೆಗೆ ಜಿಮ್‌ ಟ್ರೈನರ್‌ ಆಗಿ​ದ್ದರು. ಕಳೆದ ಮೂರು ತಿಂಗ​ಳಿ​ನಿಂದ ಲಾಕ್‌ಡೌನ್‌ ಆದ ಕಾರಣ ಜಿಮ್‌ ತೆರೆ​ದಿ​ರ​ಲಿಲ್ಲ. ಹಣ​ಕಾ​ಸಿನ ತೊಂದ​ರೆ​ಯಿಂದ ಮಂಡ್ಯಕ್ಕೆ ವಾಪ​ಸಾದ ಸುಶೀ​ಲ್‌​ ಕು​ಮಾರ್‌ ತನ್ನ ಮನೆ​ಯಲ್ಲೇ ಇದ್ದನು.

'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು!

ಸುಶೀ​ಲ್‌​ಕು​ಮಾರ್‌ ಸಹೋ​ದರಿ ಅಮೆ​ರಿ​ಕಾ​ದ ಕೆನ​ಡಾ​ದ​ಲ್ಲಿ​ ವಾಸ​ವಾ​ಗಿ​ದ್ದಾರೆ. ತಂದೆ ನಾಗ​ರಾಜು ಪೊಲೀಸ್‌ ಇಲಾ​ಖೆ​ಯಲ್ಲಿ ಕರ್ತವ್ಯ ನಿರ್ವ​ಹಿಸಿ ನಿವೃ​ತ್ತ​ರಾ​ಗಿದ್ದು, ತಾಯಿ ಬ್ಯೂಟಿ​ಪಾ​ರ್ಲರ್‌ ನಡೆ​ಸು​ತ್ತಿ​ದ್ದಾ​ರೆ. ಕಳೆದ 15 ದಿನ​ಗ​ಳಿಂದ ಇಂಡು​ವಾಳು ಗ್ರಾಮದ ತನ್ನ ಸ್ನೇಹಿತ ಮನೆ​ಯಲ್ಲಿದ್ದ ಸುಶೀಲ್‌ ಕು​ಮಾರ್‌ ರಾತ್ರಿ ಮನೆ​ಯ ಕೊಠ​ಡಿ​ಯಲ್ಲಿ ನೇಣು ಬಿಗಿದು ಆತ್ಮ​ಹ​ತ್ಯೆ ಮಾಡಿ​ಕೊಂಡಿ​ದಿದ್ದಾನೆ. ಆತ್ಮ​ಹ​ತ್ಯೆಗೆ ಮಾನ​ಸಿಕ ಖಿನ್ನ​ತೆಯೇ ಕಾರಣ ಎಂದು ಹೇಳ​ಲಾ​ಗಿ​ದೆ.