ಈ ಹಿಂದೆ ಈ ಚಿತ್ರಕ್ಕೆ ‘ಮೈ ನೇಮ್‌ ಈಸ್‌ ಆಂಜಿ’ ಎನ್ನುವ ಟೈಟಲ್‌ ಫಿಕ್ಸ್‌ ಆಗಿತ್ತು. ಆದರೆ ಈಗ ಅದನ್ನು ಡ್ರಾಪ್‌ ಮಾಡಿ ‘ಭಜರಂಗಿ 2 ’ ಹೆಸರಲ್ಲಿ ಸೀಕ್ವೆಲ್‌ ಮಾಡಲು ಮುಂದಾಗಿದ್ದು, ಆ ಚಿತ್ರಕ್ಕೆ ಜೂನ್‌ 20ರಿಂದ ಅಧಿಕೃತವಾಗಿ ಚಾಲನೆ ಸಿಗುತ್ತಿದೆ.

ಜೂನ್‌ 20 ರಿಂದ ಜುಲೈ 5ರವರೆಗೆ ಫಸ್ಟ್‌ ಶೆಡ್ಯೂಲ್‌ ಚಿತ್ರೀಕರಣ ಫಿಕ್ಸ್‌ ಆಗಿದೆ. ‘ಸ್ಕಿ್ರಪ್ಟ್‌ ವರ್ಕ್ ಬಹುತೇಕ ಮುಗಿದಿದೆ. ಕತೆ, ಚಿತ್ರಕತೆ ಜತೆಗೆ ಸಂಭಾಷಣೆ ಕೂಡ ಬರೆದಾಗಿದೆ. ಅಂದುಕೊಂಡಂತೆ ಜೂನ್‌ 20ಕ್ಕೆ ಚಿತ್ರೀಕರಣ ಶುರು ಮಾಡುವ ಆಲೋಚನೆಯಲ್ಲಿದ್ದೇವೆ. ಅದಕ್ಕೆ ಪೂರಕವಾಗಿಯೇ ಈಗ ಸಿದ್ಧತೆಗಳು ಭರದಿಂದ ಸಾಗಿವೆ.

ರುಸ್ತುಂ ರಗಡ್ ಕಾಪ್ ಶಿವರಾಜ್‌ಕುಮಾರ್ ಸಂದರ್ಶನ

ಫಸ್ಟ್‌ ಶೆಡ್ಯೂಲ್‌ ಜುಲೈ 5ರವರೆಗೆ ನಡೆಯಲಿದೆ. ಆ ನಂತರ ಜುಲೈ ಕೊನೆಯಲ್ಲಿ ಸೆಕೆಂಡ್‌ ಶೆಡ್ಯೂಲ್‌ ಚಿತ್ರೀಕರಣ ಶುರುವಾಗುತ್ತಿದೆ’ ಎನ್ನುತ್ತಾರೆ ನಿರ್ದೇಶಕ ಹರ್ಷ. ವಿಶೇಷ ಅಂದ್ರೆ ಟಗರು ಚಿತ್ರದ ಭರ್ಜರಿ ಸಕ್ಸಸ್‌ ನಂತರ ಶಿವರಾಜ್‌ ಕುಮಾರ್‌ ಹಾಗೂ ನಟಿ ಭಾವನಾ ಮತ್ತೆ ಇಲ್ಲಿ ಜತೆಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ವಿಲನ್‌ ಪಾತ್ರಗಳಿಗೆ ಇಬ್ಬರು ಯುವ ನಟರನ್ನು ಚಿತ್ರರಂಗಕ್ಕೆ ಪರಿಚಯಿಸಲು ಹರ್ಷ ಮುಂದಾಗಿದ್ದಾರೆ. ಸದ್ಯಕ್ಕೆ ಅವರ ಹೆಸರು ಬಹಿರಂಗವಾಗಿಲ್ಲ.